ಶಿವಮೊಗ್ಗದಲ್ಲಿ ರಂಭಾಪುರೀಶ ನಿವಾಸದ ಉದ್ಘಾಟನೆ | ಸಮಾಜದಲ್ಲಿ ಸಂಘಟನೆಗಳು ನಡೆಯಬೇಕಲ್ಲದೇ ಸಂಘರ್ಷಗಳು ನಡೆಯಬಾರದು ; ರಂಭಾಪುರಿ ಶ್ರೀಗಳು

Written by malnadtimes.com

Published on:

SHIVAMOGGA | ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳು ಬೆಳೆದುಕೊಂಡು ಬರಬೇಕು. ಸಮಾಜದಲ್ಲಿ ಸಂಘಟನೆಗಳು ನಡೆಯಬೇಕಲ್ಲದೇ ಸಂಘರ್ಷಗಳು ನಡೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಬುಧವಾರ ಶಿವಮೊಗ್ಗ ನಗರದ ಹರಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಜಗದ್ಗುರು ರಂಭಾಪುರೀಶ ನಿವಾಸದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮಳೆ ವಿವರ

ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ. ಅರಿವು ಜಾಗೃತಗೊಂಡಾಗ ಬದುಕು ವಿಕಾಸಗೊಳ್ಳುತ್ತದೆ. ಜೀವನದಲ್ಲಿ ಸುವರ್ಣ ಸಂಪಾದಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಬೆಳೆಯುತ್ತಲೇ ಇವೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಬಂಧನೆಗಳು ಶಾಶ್ವತವಾಗಿರುತ್ತವೆ. ವೀರಶೈವ ಧರ್ಮ ಉದಾತ್ತವಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಉಜ್ವಲ ಬದುಕಿನ ನಿರ್ಮಾಣಕ್ಕೆ ಅಡಿಪಾಯವಾಗಿವೆ. ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಧರ್ಮ ಮತ್ತು ದೇಶ ಕಟ್ಟಿ ಬೆಳೆಸುವುದರಲ್ಲಿ ಯುವ ಜನಾಂಗ ಶ್ರಮಿಸಿದರೆ ಬಹಳಷ್ಟು ಪ್ರಗತಿ ಸಾಧಿಸಲು ಸಾಧ್ಯವಿದೆ. ಶ್ರೀ ಪೀಠದ ಬಹು ದಿನಗಳ ಕನಸು ಇಂದು ನನಸಾದ ಸಂತೋಷ ನಮಗಿದೆ. ಭೂದಾನ ಮಾಡಿದ ಟಿ.ವಿ.ಈಶ್ವರಯ್ಯ ಸಹೋದರರ ಸೇವೆ ಅಮೂಲ್ಯವಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಶೈಕ್ಷಣಿಕ ತಜ್ಞರೊಂದಿಗೆ ಚರ್ಚಿಸಿ ಆದರ್ಶ ವಿದ್ಯಾಲಯ ಹುಟ್ಟು ಹಾಕುವ ಉದ್ದೇಶ ನಮಗಿದೆ ಎಂದರು.

ನೂತನ ಕಟ್ಟಡ ಉದ್ಘಾಟಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭಾರತ ದೇಶ ಧರ್ಮ ಭೂಮಿ ಯೋಗ ಭೂಮಿ. ಈ ಭಾಗದಲ್ಲಿ ಶ್ರೀ ರಂಭಾಪುರಿ ಪೀಠದ ಗುರುನಿವಾಸ ನಿರ್ಮಾಣಗೊಂಡು ಉದ್ಘಾಟನೆಗೊಂಡಿದ್ದು ಭಕ್ತರೆಲ್ಲರ ಸೌಭಾಗ್ಯವಾಗಿದೆ. ಸದ್ಭಾವ ಸಾಮರಸ್ಯಬದುಕಿಗೆ ಅಮೂಲ್ಯ ಕೊಡುಗೆಯಿತ್ತ ಕೀರ್ತಿ ಶ್ರೀ ರಂಭಾಪುರಿ ಪೀಠಕ್ಕಿದೆ. ಪ್ರಸ್ತುತ ಜಗದ್ಗುರುಗಳವರ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಬಹು ದೊಡ್ಡ ಸಾಧನೆ ಮಾಡಿದ ಶ್ರೇಯಸ್ಸು ಅವರಿಗಿದೆ. ಪರಮ ಪೂಜ್ಯರ ಆಶೀರ್ವಾದ ಭಕ್ತ ಸಂಕುಲದ ಮೇಲೆ ಸದಾ ಇರಲೆಂದು ಬಯಸಿದರು.

ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಪ್ರತಿಯೊಬ್ಬರಲ್ಲಿ ರಾಷ್ಟ್ರಾಭಿಮಾನ ಹಾಗೂ ಧರ್ಮಾಭಿಮಾನ ಬೆಳೆದುಕೊಂಡು ಬರಬೇಕಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಧಾರ್ಮಿಮ ಮತ್ತು ಸಾಮಾಜಿಕ ಚಿಂತನಗಳು ಭಕ್ತರ ಬಾಳಿಗೆ ಬೆಳಕು ತೋರುತ್ತವೆ ಎಂದರು.

ಈ ಅಪೂರ್ವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಯನೂರು ಮಂಜುನಾಥ್, ಅ.ಭಾ.ವೀ.ಲಿಂ. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎಸ್.ಸಜ್ಜನ, ಪ್ರಧಾನ ಕಾರ್ಯದರ್ಶಿ ಮಹೇಶ್‌ಮೂರ್ತಿ ಸಿ., ನಿರ್ಮಿತಿ ಕೇಂದ್ರದ ಯೋಜನ ವ್ಯವಸ್ಥಾಪಕ ನಾಗರಾಜ್ ಕೆ., ಶ್ರೀಮತಿ ಪಾರ್ವತಮ್ಮ ಪಂಚಾಕ್ಷರಯ್ಯ, ಹೆಚ್.ವಿ.ಮರುಳೇಶ ಪಾಲ್ಗೊಂಡಿದ್ದರು.

ಬಸ್ ಹತ್ತುವಾಗ ತುಂಡಾದ ಡೋರ್ ಲಾಕ್, ಮಹಿಳೆಗೆ ಗಂಭೀರ ಗಾಯ !

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದರೆ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮಳಲಿ ಡಾ.ನಾಗಭೂಷಣ ಶ್ರೀಗಳು, ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶ್ರೀಗಳು, ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶ್ರೀಗಳು, ಚನ್ನಗಿರಿ ಡಾ|| ಕೇದಾರ ಶಿವಶಾಂತವೀರ ಶ್ರೀಗಳು, ನಂದಿಪುರದ ನಂದೀಶ್ವರ ಶ್ರೀಗಳು, ಕೊಣಂದೂರು ಪಸುಪತಿ ಪಂಡಿತಾರಾಧ್ಯ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ರಟ್ಟಿಹಳ್ಳಿ ವಿಶ್ವೇಶ್ವರ ದೇವರು ಇದ್ದರು.

ಇದೇ ಸಂದರ್ಭದಲ್ಲಿ ಲಿಂ. ರುದ್ರಮ್ಮ (ಮರುಳಮ್ಮ) ಲಿಂ.ಪಟೇಲ ವೀರಪ್ಪಯ್ಯ ತೇವರಚಟ್ನಳ್ಳಿ ಇವರ ಸ್ಮರಣಾರ್ಥ ಭೂ ದಾನ ಮಾಡಿರುವ ಲಿಂ. ನಾಗರತ್ನಮ್ಮ ಲಿಂ.ಟಿ.ವಿ.ಲಿಂಗಯ್ಯ ಇವರ ಮಕ್ಕಳು, ಲಿಂ.ಜಯಮ್ಮ ಟಿ.ವಿ.ಈಶ್ವರಯ್ಯ ಮತ್ತು ಮಕ್ಕಳು, ಲಿಂ.ಸುನಂದಮ್ಮ ಟಿ.ವಿ.ರುದ್ರಯ್ಯ ಮತ್ತು ಮಕ್ಕಳು, ಲಿಂ. ಲಲಿತಮ್ಮ ಬಿ.ಎಂ.ಹಾಲೇಶಯ್ಯ ಇವರ ಮಕ್ಕಳು, ಲಿಂ. ವಿಜಯಮ್ಮ ಟಿ.ವಿ.ಶಿವಲಿಂಗಯ್ಯ ಮತ್ತು ಮಕ್ಕಳು ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಸಮಿತಿಯ ಸದಸ್ಯರಿಗೆ ಹಾಗೂ ಭೂ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಭೂದಾನಿಗಳ ಪರವಾಗಿ ಶ್ವೇತಾ ಮಾತನಾಡಿದರು.

ಶ್ರೀ ಜಗದ್ಗುರು ರಂಭಾಪುರೀಶ ನಿವಾಸ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಟಿ.ವಿ. ಈಶ್ವರಯ್ಯ, ಉಪಾಧ್ಯಕ್ಷರಾದ ಬಿ.ಸಿ.ನಂಜುಂಡಶೆಟ್ಟಿ, ಖಜಾಂಚಿ ಬಿ.ಎಸ್.ಮಹದೇವಪ್ಪ, ಸಂಚಾಲಕ ಹೆಚ್.ಆರ್.ಉಮೇಶಾರಾಧ್ಯ, ಸದಸ್ಯರುಗಳಾದ ಎಸ್.ಹೆಚ್.ಸಿದ್ಧಣ್ಣ, ಹೆಚ್.ವಿ.ಮಹೇಶ್ವರಪ್ಪ, ಎಸ್.ಎಂ.ಓಂಕಾರಮೂರ್ತಿ, ಮುರುಘೇಂದ್ರ ಪಾಟೀಲ್ (ಅಥಣಿ), ಹೆಚ್.ವಿ.ಮರುಳೇಶ್, ಬಿ.ಜಿ.ಕರುಣೇಶ್, ಎಸ್.ಎಂ.ವೀರಭದ್ರಪ್ಪ, ಹೆಚ್.ಜೆ.ಚಂದ್ರಶೇಖರ್ (ಜಯದೇವ), ಟಿ.ವಿ.ಶಿವಲಿಂಗಯ್ಯ, ಹೆಚ್.ಸತೀಶ್ (ಓಂಕಾರ್) ಹಾಗೂ ವಿಘ್ನೇಶ್ವರಯ್ಯ ನಿ.ಸೊಲ್ಲಾಪುರ ಇದ್ದರು.

ಎಸ್.ಎಸ್.ಜ್ಯೋತಿಪ್ರಕಾಶ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಎನ್.ಜೆ.ರಾಜಶೇಖರ ಸ್ವಾಗತಿಸಿದರು. ಶಾಂತಾ ಆನಂದ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಹಿಂದಿನ ದಿನ ಶ್ರೀ ವಿರೂಪಾಕ್ಷಯ್ಯ ಶಾಸ್ತ್ರಿ ಸಂಗಡಿಗರಿಂದ ಶ್ರೀ ಜಗದ್ಗುರು ರಂಭಾಪುರೀಶ ನಿವಾಸದಲ್ಲಿ ವಾಸ್ತು ಶಾಂತಿ-ರುದ್ರಹೋಮ ಜರುಗಿತು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.

New Sim Card Rules |  ಜುಲೈ 1ರಿಂದ ಬದಲಾಗಿದೆ ಸಿಮ್ ಕಾರ್ಡ್‌ನ ನಿಯಮಗಳು ! ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment