RIPPONPETE | ಯಾಂತ್ರೀಕೃತ ಭತ್ತ ನಾಟಿ ಪದ್ದತಿಯಿಂದ ಶೇ.20 ಇಳುವರಿ ಹೆಚ್ಚಳವಾಗಲಿದೆ ಎಂದು ಧರ್ಮಸ್ಥಳ ಸಂಘದ ಹೊಸನಗರ ತಾಲೂಕು ಯೋಜನಾಧಿಕಾರಿ ಪ್ರದೀಪ್ ಹೇಳಿದರು.
ಅವರು ಸೋಮವಾರ ಹುಂಚ ವಲಯದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ನೆಣೆಬಸ್ತಿಯ ಸಂತೋಷ್ ಎಂಬುವರ ಭತ್ತದ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾಂತ್ರಿಕೃತ ಭತ್ತ ಬೇಸಾಯ ಪದ್ದತಿಯು ರೈತರಿಗೆ ವರದಾನವಾಗಿದ್ದು ಸಾಮಾನ್ಯ ಪದ್ದತಿಯ ಭತ್ತ ಬೇಸಾಯಕ್ಕಿಂತ ಇದರಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಈ ಪದ್ಧತಿಯಲ್ಲಿ ಕಡಿಮೆ ಬಿತ್ತನೆ ಬೀಜ, ಕಡಿಮೆ ನೀರಾವರಿ ಬಳಸಿ ಹೆಚ್ಚಿನ ಇಳುವರಿ ಪಡೆಯುವುದು ವಿಶೇಷವಾಗಿದೆ. ಅಲ್ಲದೇ ಕೃಷಿ ಕೂಲಿಯಾಳುಗಳ ಸಮಸ್ಯೆ ಎದುರಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಯಂತ್ರ ನಾಟಿಯು ಕೂಲಿಯಾಳ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದ ಬೇಸಾಯದ ಖರ್ಚು, ಸಮಯ ಉಳಿತಾಯವಾಗಲಿದೆ. ಆದ್ದರಿಂದ ಎಲ್ಲಾ ರೈತ ಬಾಂಧವರು ಯಾಂತ್ರೀಕೃತ ಭತ್ತ ನಾಟಿ ಪದ್ಧತಿಯನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಭಾರಿ ಮಳೆಗೆ ರಸ್ತೆ ಮಧ್ಯೆ ಬಿದ್ದ ಭಾರಿ ಪ್ರಮಾಣದ ಹೊಂಡ | ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಿಪ್ಪನ್‌ಪೇಟೆ ವಿದ್ಯಾರ್ಥಿಗಳು ಆಯ್ಕೆ
ಕೃಷಿ ಇಲಾಖೆ ಅಧಿಕಾರಿ ರವಿಕುಮಾರ್, ಯಂತ್ರಶ್ರೀ ಬೇಸಾಯ ಕ್ರಮಗಳು ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ, ಇಲಾಖೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ಶಶಿಧರ್, ಕೋಡೂರು ಕೃಷಿ ಯಂತ್ರಧಾರೆ ಪ್ರಬಂಧಕ ಅಕ್ಷಯ್, ಒಕ್ಕೂಟದ ಪದಾಧಿಕಾರಿ ತೀರ್ಥೇಶ್, ವಲಯದ ಮೇಲ್ವಿಚಾರಕ ತಿಮ್ಮಪ್ಪ, ಸೇವಾಪ್ರತಿನಿಧಿ ಕವನ, ರೈತರಾದ ಸಂತೋಷ್, ಮಂಜಪ್ಪ, ದಿನೇಶ್ ಹಾಗೂ ಸಂಘದ ಸದಸ್ಯರು ರೈತ ಬಾಂಧವರು ಉಪಸ್ಥಿತರಿದ್ದರು.