ಮೇಟಿ ಕಂ ವಾಚ್‌ಮೆನ್ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

Written by Koushik G K

Published on:

ಶಿವಮೊಗ್ಗ ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಧೀನದಲ್ಲಿರುವ ಸೈನಿಕ ಆರಾಮ ಗೃಹದಲ್ಲಿ ಖಾಲಿ ಇರುವ ಮೇಟಿ ಕಂ ವಾಚ್‌ಮನ್ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತರಾದ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛೆಪಟ್ಟ ಅಭ್ಯರ್ಥಿಗಳು ತಮ್ಮ ಸ್ವಯಂ ಲಿಖಿತ ಅರ್ಜಿ ಮತ್ತು ಸ್ವವಿವರ (ಬಯೋಡೇಟಾ) ಗಳನ್ನು ಜೂನ್ 30, 2025ರ ಸಂಜೆ 5:00 ಗಂಟೆಯೊಳಗೆ ಶಿವಮೊಗ್ಗದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಸಶಸ್ತ್ರ ಸೇನೆ, ನೌಕಾಪಡೆ ಅಥವಾ ವಾಯುಪಡೆಯಿಂದ ನಿವೃತ್ತರಾಗಿರಬೇಕು. ಅರ್ಜಿ ಜೊತೆಗೇ ಸೇವಾ ದಾಖಲಾತಿ ಪತ್ರ (Discharge Certificate), ಗುರುತಿನ ಪಟ್ಟಿ, ವಿಳಾಸದ ಪುರಾವೆ ಹಾಗೂ ಇತರ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು.

ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಹೊಸ ವಿಧಾನ: ಪೋಷಕರು, ವಿದ್ಯಾರ್ಥಿಗಳು ಗಮನಿಸಿ!

ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.

ಮುಖ್ಯ ಮಾಹಿತಿಗಳು:

  • ಹುದ್ದೆ ಹೆಸರು: ಮೇಟಿ ಕಂ ವಾಚ್‌ಮನ್
  • ನೇಮಕಾತಿ ಪ್ರಕಾರ: ಹೊರಗುತ್ತಿಗೆ ಆಧಾರ
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 30, 2025
  • ಸ್ಥಳ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿ, ಶಿವಮೊಗ್ಗ

Read More :ಪಿಹೆಚ್‌ಡಿ ಸಂಶೋಧನಾರ್ಥಿಗಳಿಗೆ ಫೆಲೋಶಿಪ್‌: ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಅಂತಿಮ ದಿನ

Leave a Comment