ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಅಧಿಕಾರಸ್ಥರಿಂದಲೆ ತೊಡಕು ; ಬಿ. ಸ್ವಾಮಿರಾವ್ ಗಂಭೀರ ಆರೋಪ

Written by malnadtimes.com

Published on:

RIPPONPETE ; ಪುರಾಣಪ್ರಸಿದ್ಧ ಜೇನುಕಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಆಡಳಿತದಲ್ಲಿರುವ ನಾಯಕರು ಮತ್ತು ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಶ್ರೀ ಜೇನುಕಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸ್ವಾಮಿರಾವ್ ಗಂಭೀರ ಆರೋಪ ಮಾಡಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಸತ್ಕಾರ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡುವರೆ ವರ್ಷಗಳಿಂದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಭಕ್ತರ ಸಹಕಾರದಿಂದ ಶ್ರಮಿಸುತ್ತಿದ್ದು, 5 ಕೋಟಿ ರೂಪಾಯಿ ವೆಚ್ಚದ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಿ, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 35 ಲಕ್ಷ ರೂಪಾಯಿಗಳಿಗೂ ಅಧಿಕ ವೆಚ್ಚದ ಕಾಮಗಾರಿ ನಡೆದಿದೆ. ಆದರೆ ಈ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಲಗೋಡು ರತ್ನಾಕರರವರು ಅವರ ಖಾತೆಯಲ್ಲಿರುವ 20 ಲಕ್ಷ ರೂಪಾಯಿಯ ದೇವಸ್ಥಾನದ ಹಣವನ್ನು ಇಂದಿಗೂ ಅಭಿವೃದ್ಧಿ ಕಾರ್ಯಗಳಿಗೆ ನೀಡಿರುವುದಿಲ್ಲ.

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಳಿ ತೆರಳಿ ಒಂದು ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿದ್ದೇನೆ. ಶಿವಮೊಗ್ಗ ನಿರ್ಮಿತಿ ಕೇಂದ್ರದ ಅಧಿಕಾರಿ ಹಣ ಬಿಡುಗಡೆ ಮಾಡಲು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರುರವರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ. ದೇವಸ್ಥಾನ ಮಹದ್ವಾರದ ಶಂಕುಸ್ಥಾಪನೆಗೆ ಶಾಸಕರನ್ನು ಕರೆದರು ಬರದಿರುವುದು, ಭೇಟಿಗೂ ನಿರಾಕರಿಸಿರುವುದು ಬೇಸರ ತರಿಸಿದೆ. ಇವರ ಈ ಬೇಜವಾಬ್ದಾರಿ ನಡೆವಳಿಕೆಗಳಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನೆಡೆಯಾಗಿದ್ದು ಭಕ್ತರಲ್ಲಿ ಅಸಹನೆ ಮೂಡುವಂತಾಗಿದೆ. ಅಧಿಕಾರಸ್ತರೇ ದೇವಿ ಹಾಗೂ ಭಕ್ತರಬಗ್ಗೆ ತತ್ಸಾರ ಮಾಡಿದರೆ ಕಾಪಾಡುವರ‍್ಯಾರು? ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅಧಿಕಾರಿಗಳ ಆಟಾಠೋಪಗಳಿಗೆ ಬೇಸತ್ತು ಹೋಗಿದ್ದೇವೆ. ಆದ್ದರಿಂದ ಭಕ್ತರು ಮತ್ತು ಜನರ ದೇಣಿಗೆ, ಕಾಣಿಕೆ ಹಣವನ್ನು ದುರ್ಬಳಿಕೆ ಆಗಲು ಅವಕಾಶ ಕೊಡುವುದಿಲ್ಲ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದೇವಸ್ಥಾನದ ಹಣವನ್ನು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಕೊಡದಿರುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇನೆ. ಇದಕ್ಕೆ ಬಗ್ಗದಿದ್ದಲ್ಲಿ ದೇವಿ ಸನ್ನಿಧಿಯಲ್ಲಿ ದೇವರ ಹಣ ಇಟ್ಟುಕೊಂಡವರ ವಿರುದ್ಧ ಹುಯಿಲು ಹಾಕುತ್ತೇವೆ. ನಂತರ ದೇವಸ್ಥಾನದ ಹಣ ಇಟ್ಟುಕೊಂಡವರ ಮನೆಯ ಮುಂದೆ ಭಕ್ತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಿತಿಯ ಸುಧೀರ್ ಭಟ್ ಗೋಷ್ಠಿಯಲ್ಲಿದ್ದರು.

Leave a Comment