ನಾಗರ ಪಂಚಮಿ ಪ್ರಯುಕ್ತ ಆ.09 ರಂದು ನಾಗರಹಳ್ಳಿಯಲ್ಲಿ ಜಾತ್ರಾ ಮಹೋತ್ಸವ

Written by malnadtimes.com

Published on:

RIPPONPETE | ಇತಿಹಾಸ ಪ್ರಸಿದ್ದ ನಾಗರಹಳ್ಳಿ “ಶ್ರೀನಾಗೇಂದ್ರಸ್ವಾಮಿಯ’’ ಜಾತ್ರಾ ಮಹೋತ್ಸವವನ್ನು ಆ. 9 ರಂದು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ವರ್ಷದಲ್ಲಿ ಎರಡು ಭಾರಿ ಆಚರಿಸುವ ನಾಗರಹಳ್ಳಿ ನಾಗೇಂದ್ರಸ್ವಾಮಿಯ ಜಾತ್ರಾ ಮಹೋತ್ಸವವು ಆಗಸ್ಟ್ 9 ರಂದು ಶುಕ್ರವಾರ ಮುಂಜಾನೆಯಿಂದ ಆರಂಭಗೊಂಡು ಸಂಜೆಯವರೆಗೆ ಜರುಗಲಿದ್ದು ಸಕಲ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನಾಶೀರ್ವಾದ ಪಡೆಯಲು ಪ್ರಕಟಣೆ ತಿಳಿಸಿದೆ.

ಧರೆ ಕುಸಿತದಿಂದ ಸಂಪರ್ಕ ಕಡಿತಗೊಳ್ಳುವ ಆತಂಕ, ಘಟನಾ ಸ್ಥಳಕ್ಕೆ ಮಾಜಿ ಸಚಿವ ಕಿಮ್ಮನೆ ಭೇಟಿ, ಪರಿಶೀಲನೆ


ಸಾಮಾಜಿಕ ಪರಿಶೋಧನೆ ಪೂರ್ವಭಾವಿ ಗ್ರಾಮಸಭೆ

RIPPONPETE | ಇಲ್ಲಿನ ಗ್ರಾಮ ಪಂಚಾಯಿತ್ ಕುವೆಂಪು ಸಭಾಭವನದಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಇವರ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023ರ ಏ.1 ರಿಂದ 2024ರ ಮಾ.31 ರವರೆಗೆ ಕೈಗೊಂಡ ಕಾಮಗಾರಿಗಳ ಮತ್ತು 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಪೂರ್ವ ಗ್ರಾಮ ಸಭೆ ಜರುಗಿತು.

ಈ ಸಭೆಯಲ್ಲಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಧುಸೂದನ್ ಮಾತನಾಡಿ ಸ್ತ್ರಿಶಕ್ತಿ ಸಂಘದ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಮುಂದೆ ಬಂದರೆ ಆವರಿಗೆ ಹೆಚ್ಚು ಕಾಮಗಾರಿಗೆ ಆವಕಾಶ ಕಲ್ಪಿಸಲಾಗುವುದು ಅಲ್ಲದೆ ಮಹಿಳಾ ಸಂಘಗಳು ಪ್ರಗತಿ ಹೊಂದಲು ಸಹಕಾರಿಯಾಗುವುದೆಂದು ವಿವರಿಸಿದರು.

ಬಹುತೇಕ ಭರ್ತಿ ಹಂತ ತಲುಪಿದ ಲಿಂಗನಮಕ್ಕಿ ಜಲಾಶಯ, 3 ಗೇಟ್‌ಗಳ ಮೂಲಕ 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಮಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ನಿರೂಪ್ ಕುಮಾರ್, ಇನ್ನಿತರರು ಪಾಲ್ಗೊಂಡು ಮಾತನಾಡಿದರು.
ಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ರಕ್ತೇಶ್ವರಿ ಮತ್ತು ನಾಗದೇವರ ದೇವಸ್ಥಾನದಲ್ಲಿ ನಾಗರ ಪಂಚಮಿ :

ರಿಪ್ಪನ್‌ಪೇಟೆ ತಿಲಕ್‌ನಗರ ಬಡಾವಣೆಯಲ್ಲಿರುವ ಶ್ರೀ ರಕ್ತೇಶ್ವರಿ ಮತ್ತು ನಾಗದೇವರ ಸನ್ನಿಧಿಯಲ್ಲಿ ಅಗಸ್ಟ್ 9 ರಂದು ನಾಗರ ಪಂಚಮಿಯ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment