ರಿಪ್ಪನ್‌ಪೇಟೆ ; ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸರೂರು ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿ ಅವೈಜ್ಞಾನಿಕವಾಗಿದ್ದು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಓವರ್‌ಹೆಡ್ ಟ್ಯಾಂಕ್‌ನಿಂದ ನೀರು ಹರಿಯದೆ ಗ್ರಾಮೀಣ ಜನರು ಶುದ್ದ ನೀರಿಗಾಗಿ ಪರಿತಪ್ಪಿಸುವಂತಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ಶಾಶ್ವತವಾಗಿ ಶುದ್ದ ನೀರು ಹರಿಸುವ ಕೇಂದ್ರ ಮತ್ತು ರಾಜ್ಯ ಮಹತ್ವಾಕಾಂಕ್ಷಿ ಯೋಜನೆ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸರೂರು ಬಳಿಯಲ್ಲಿ ಜಲಜೀವನ್ ಯೋಜನೆಯಡಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಹಂತದಲ್ಲಿ ಸಾಕಷ್ಟು ತಜ್ಞರು ಎತ್ತರದ ಪ್ರದೇಶದಲ್ಲಿ ಟ್ಯಾಂಕ್ ನಿರ್ಮಿಸಿದರೆ ಸುತ್ತಮುತ್ತಲಿನ ಮಜರೆ ಗ್ರಾಮಗಳಾದ ಕ್ಯಾದಿಗೊಪ್ಪ ಮಾಣಿಕೆರೆ ದೂರದ ಮನೆಗಳಿಗೆ ನಿರಂತರ ನೀರು ಹರಿಸಲು ಸಾಧ್ಯವೆಂದು ಗಿಳಿಪಾಠ ಮಾಡಿದರೂ ಕೂಡಾ ಗ್ರಾಮ ಪಂಚಾಯಿತ್ ಸದಸ್ಯರ ಮತ್ತು ಜೆಜೆಎಂ ಇಂಜಿನಿಯರ್ ಒತ್ತಡಕ್ಕೆ ಮಣಿದು ಅವೈಜ್ಞಾನಿಕವಾದ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸಿ ಈಗ ಮೇಲಿನ ಗ್ರಾಮಗಳ ಕೂಲಿ ಕಾರ್ಮಿಕರ ರೈತರ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗದೇ ಇದ್ದು ಕೇಳಿದರೆ ಗ್ರಾಮಾಡಳಿತ ಮತ್ತು ಇಂಜಿನಿಯರ್ ಮೌನವಹಿಸುತ್ತಿದ್ದಾರೆಂದು ಮಸರೂರು ಕ್ಯಾದಿಗೊಪ್ಪ ಮಾಣಿಕೆರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ವಿಫಲಗೊಂಡಿದ್ದು ಅಲ್ಲದೆ ರೇಸಿಂಗ್ ಮೈನ್ ಪೈಪ್ ಮೂಲಕ ನೇರ ನೀರು ಹರಿಸುವಂತೆ ಕಿರಿಯ ಅಭಿಯಂತರ ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿಫಲಗೊಂಡಿದ್ದು ಬಹುತೇಕ ಮನೆಗಳಿಗೆ ನೀರಿನ ವ್ಯವಸ್ಥೆಯಾಗುತ್ತಿಲ್ಲ ಗುತ್ತಿಗೆದಾರ ಮತ್ತು ಇಂಜಿಯರ್ ಇವರ ಬೇಜವಾಬ್ದಾರಿಯಿಂದಾಗಿ ಇಲ್ಲಿನ ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿ ಹಳ್ಳ ಹಿಡಿಯುವಂತಾಗಿದೆ.
ಈಗ ಪುನಃ ಹೊಸ ಪ್ಲಾನ್ ಅಂಡ್ ಎಸ್ಟಿಮೆಂಟ್ ಮಾಡಿ ಟ್ಯಾಂಕ್ ನಿರ್ಮಾಣಕ್ಕೆ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು ಸರ್ಕಾರದ ಕೋಟ್ಯಂತರ ರೂ. ಹಣ ನೀರಿನಲ್ಲಿ ಹುಣಸೆಹಣ್ಣು ಹಿಂಡಿದಂತಾಗಿ ಮಾಡಲು ಹೊರಟಿದ್ದಾರೆಂದು ಸಾರ್ವಜನಿಕರು ಅ
ಆಡಿಕೊಳ್ಳುವಂತಾಗಿದೆ.
ಇನ್ನಾದರೂ ಶಿವಮೊಗ್ಗ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯದರ್ಶಿಗಳು ಜೆಜೆಎಂ ಕಾಮಗಾರಿಯ ಸ್ಥಳಕ್ಕೆ ಭೇಟಿ ಕಳಪೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಸಂಬಂಧಿಸಿದ ನೀರಾವರಿ ಇಲಾಖೆಯೆ ಕಿರಿಯ ಅಭಿಯಂತರರ ಮತ್ತು ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಂಡು ಗುತ್ತಿಗೆದಾರನ ಕಪ್ಪು ಪಟ್ಟಿಗೆ ಸೇರಿಸುವಂತೆ ಮಾಣಿಕೆರೆ ಕ್ಯಾದಿಗೊಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ.