ಮಗನೊಂದಿಗೆ ಚಿಕ್ಕಮ್ಮನ ಸರಸದಾಟ, ಅಡ್ಡ ಬರ್ತಿದ್ದ ಗಂಡನಿಗೆ ವಿಷ ಹಾಕಿ ಕೊಂದು ಕಥೆ ಕಟ್ಟಿದ್ಲು !

Written by malnadtimes.com

Published on:

KADURU | ಪತ್ನಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದಕ್ಕೆ ಗಂಡನಿಗೆ ವಿಷ ಹಾಕಿ ಸಹಜ ಸಾವಿನ ಕಥೆ ಕಟ್ಟಿದ್ದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಿಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಕೊಲೆಯಾದ ವ್ಯಕ್ತಿಯನ್ನು ಜಯಣ್ಣ (42) ಎಂದು ಗುರುತಿಸಲಾಗಿದೆ. ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ್ದು, ನಂತರ ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಮೃತ ದೇಹವನ್ನು ಕಾರಿನಲ್ಲಿ ಊರೆಲ್ಲಾ ಸುತ್ತಾಡಿಸಿ ಆಸ್ಪತ್ರೆಗೆ ಕರೆದೊಯ್ಯುವ ನಾಟಕವನ್ನು ಆಡಿದ್ದಾರೆ. ಸದ್ಯ ಮಗಳಿಂದ ಹತ್ಯೆಯ ಹಿಂದಿನ ಅಸಲಿ ಕಥೆ ರಿವಿಲ್ ಆಗಿದೆ.

ಈ ಬಗ್ಗೆ ಸಂಬಂಧಿಕರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ವೇಳೆ ಮೃತ ಜಯಣ್ಣನ ಅಣ್ಣನ ಮಗ ಕಿರಣ್ ಜೊತೆ ಅನೈತಿಕ ಸಂಬಂಧ ಇದಿದ್ದು ದೃಢವಾಗಿದೆ. ಅಲ್ಲದೇ ಮರಣೋತ್ತರ ವರದಿಯಲ್ಲಿ ಕೊಲೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳಾದ ಮೃತನ ಪತ್ನಿ ಶೃತಿ ಹಾಗೂ ಮಗ ಕಿರಣ್ ನನ್ನು ಸಖರಾಯಪಟ್ಟಣ ಠಾಣೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ ?

ದೊಡ್ಡಿಬೀರನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದ ಜಯಣ್ಣ ಟೈಲ್ಸ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ 15ನೇ ತಾರೀಖು ರಾತ್ರಿ ಏಕಾಏಕಿ ಸಾವನ್ನಪ್ಪಿದ್ದರು. ಈ ವೇಳೆ ಗಂಡ ಹೊಟ್ಟೆ ನೋವಿನಿಂದ ಬಳುತ್ತಿದ್ದರು. ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ಕರೆದುಕೊಂಡು ಹೋದರು ಫಲಕಾರಿ ಆಗಿಲ್ಲ ಎಂದು ನಾಟಕ ಮಾಡಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಳಂತೆ.

ಘಟನೆ ಬೆಳಕಿಗೆ ಬಂದಿದ್ದೇಗೆ ?

ಮೃತ ಜಯಣ್ಣ ಸಂಬಂಧಿಕರಿಗೆ ಸಾವಿನ ಬಗ್ಗೆ ಅನುಮಾನ ಬಂದಿದ್ದು, ಈ ಬಗ್ಗೆ ಆತನ ಮಗಳನ್ನು ಕೇಳಿದ ವೇಳೆ ಅಮ್ಮ, ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ಆಸ್ಪತ್ರೆಗೆ ಅಂತ ಹೇಳಿ ಕಾರಿನಲ್ಲೇ ಸಾಯುವವರೆಗೂ ಸುತ್ತಾಟ ಮಾಡಿದ್ದಳು ಎಂದು ಹೇಳಿದ್ದರಂತೆ. ಇದರೊಂದಿಗೆ ಸಂಬಂಧಿಕರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರಂತೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪತ್ನಿಗೆ ಶಾಕ್ ಕೊಟ್ಟಿದ್ದರಂತೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ವರದಿಗಾಗಿ ಪೊಲೀಸರು ಕಾದಿದ್ದಾರೆ. ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಇನ್ನು ಬಂಧಿತ ಕಿರಣ್, ಶೃತಿಗೆ ಸಂಬಂಧದಲ್ಲಿ ಮಗ ಆಗಬೇಕಿದ್ದು, ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿಯ ಮಗಳೇ ಅಪ್ಪನ ಹತ್ಯೆಯ ಹಿಂದಿನ ಅಸಲಿ ಕಥೆ ರಿವೀಲ್ ಮಾಡಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Leave a Comment