ಚಿಕ್ಕಮಗಳೂರು ಜಿಲ್ಲಾ ಸುದ್ದಿ ಶಿವಮೊಗ್ಗ

Bhadra Dam :ಜುಲೈ 1ರಿಂದ ಭಾರಿ ಪ್ರಮಾಣದ ನೀರು ಬಿಡುಗಡೆ: ನದಿ ತೀರದ ಜನತೆಗೆ ಎಚ್ಚರಿಕೆ

Bhadra Dam :ರಾಜ್ಯಕ್ಕೆ ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು ಅದರ ಪರಿಣಾಮವಾಗಿ ಹಲವೆಡೆ ಭಾರೀ ಮಳೆಯಾಗಿದೆ. ಹಲವು ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಕೆಲವು ಪ್ರಮುಖ ಜಲಾಶಯಗಳಿಗೂ ಸಹ ಈಗಾಗಲೇ ಉತ್ತಮ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ದಿನಕ್ಕೆ ಸುಮಾರು 20,000 ರಿಂದ 25,000 ಕ್ಯೂಸೆಕ್ ಒಳಹರಿವಿದ್ದು ಈ ಹಿನ್ನೆಲೆಯಲ್ಲೇ ಭದ್ರಾ ಜಲಾಶಯದಿಂದ ಜುಲೈ 1ರಿಂದ ಸ್ಪಿಲ್‌ವೇ ಗೇಟ್‌ಗಳ ಮೂಲಕ ನೀರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆ ನೀಡಿದ್ದು, Spillway Gate ಮೂಲಕ ನೀರು ಹೊರಬಿಡುವ ಮುನ್ನ ನದಿಯ ಪಾತ್ರದಲ್ಲಿರುವ ಜನತೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಲಾಗಿದೆ.

ನದಿ ತೀರದ ಪ್ರದೇಶಗಳಲ್ಲಿ ಇರುವ ಜನರು, ಕೃಷಿಕರು ಮತ್ತು ಪಶುಪಾಲಕರು ತಮ್ಮ ಪಶುಗಳನ್ನು ಹಾಗೂ ತಾವು ಬಳಸುವ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

badra

ಇದೇ ವೇಳೆ, ನೀರು ಹರಿವಿನಿಂದ ಯಾವುದೇ ಅವಘಡ ಸಂಭವಿಸದಂತೆ ಮುಂಚಿತ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸ್ಥಳೀಯ ಆಡಳಿತ ಹಾಗೂ ಜನತೆಯು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More :ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment