ರಿಪ್ಪನ್‌ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 32ನೇ ವರ್ಷದ ವಾರ್ಷಿಕೋತ್ಸವ ಮತ್ತು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿದ್ದು ಕರುನಾಡ ಕನ್ನಡ ಹಬ್ಬದ ಸಂಭ್ರಮಾಚರಣೆಯ ಕನ್ನಡಾಂಬೆಯ ಭವ್ಯ ಮೆರವಣಿಗೆ ಮಹಿಳಾ ಡೊಳ್ಳು ಕುಣಿತ ವೀರಗಾಸೆ ಮಕ್ಕಳ ಛದ್ಮವೇಷ ಪ್ರದರ್ಶನದ ಕಲಾಕರ್ಷಣೆ ಜನಮೆಚ್ಚುಗೆ ಗಳಿಸಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕನ್ನಡಾಂಬೆಯ ಭವ್ಯ ಮೆರವಣಿಗೆಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜುರೆಡ್ಡಿ ಕನ್ನಡ ಬಾವುಟವನ್ನು ಎತ್ತಿ ಹಿಡಿಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಕನ್ನಡ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯ ಭಾಷೆಯಾಗಿ ಎಲ್ಲರ ಹೃದಯ ಭಾಷೆಯಾಗಬೇಕು ಎಂದ ಅವರು, ಕರ್ನಾಟಕದ ಸಂಸ್ಕೃತಿ ಸಿರಿ-ಸಂಪತ್ತು ಮತ್ತು ಪರಂಪರೆ ವಿಶ್ವದಾದ್ಯಂತ ಕನ್ನಡದ ಹೆಮ್ಮೆ ಹೆಚ್ಚಿಸುತ್ತಿವೆ. ಇಂದಿನ ಯುವಪೀಳಿಗೆಯು ಇಂತಹ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯ ಪೋಷಣೆ ಮಾಡುವುದು ಅಗತ್ಯವಾಗಿದೆ ಎಂದರು.

ಕಲಾಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ಮಂಜುನಾಥ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ಅಧ್ಯಕ್ಷೆತೆ ವಹಿಸಿದ್ದರು.

ರಾಜ್ಯೋತ್ಸವ ಕಾರ್ಯಕ್ರಮವನ್ನು  ಗ್ರಾಮ ಪಂಚಾಯಿತ್ ಆಧ್ಯಕ್ಷೆ ಧನಲಕ್ಷ್ಮಿ,   ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ಪಂಚಾಯಿತ್ ಸದಸ್ಯರಾದ ಮಹಾಲಕ್ಷ್ಮಿ, ಅಶ್ವಿನಿ ರವಿಶಂಕರ್, ದೀಪಾ ಸುಧೀರ್, ವಿನೋಧ, ರವೀಂದ್ರ ಕೆರೆಹಳ್ಳಿ, ಎಂ.ಸುರೇಶಸಿಂಗ್, ತ.ಮ.ನರಸಿಂಹ ಹಾಗೂ ಪದ್ಮಾ ಸುರೇಶ್, ಉಮಾ ಸುರೇಶ್, ನಿವೃತ್ತ ನೇನಾನಿ ಪದ್ಮಾ ಇನ್ನಿತರರು ಭಾಗವಹಿಸಿ ಮಾತನಾಡಿದರು.

ನಾಗರತ್ನ ದೇವರಾಜ್ ಪ್ರಾರ್ಥಿಸಿದರು‌. ರವೀಂದ್ರ ಕೆರೆಹಳ್ಳಿ ಸ್ವಾಗತಿಸಿದರು. ಉಮಾ ಸುರೇಶ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಅದ್ಧೂರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಭುವನೇಶ್ವರಿಯ ಜಯಘೋಷಣೆ ಕೂಗಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

Leave a Comment