ಕಸಾಪ ಸರ್ವಾಧ್ಯಕ್ಷ ಡಿ.ಎಸ್.ಶ್ರೀಧರ್ ಅವರಿಗೆ ಸಮ್ಮೇಳನಕ್ಕೆ ಆಹ್ವಾನ | ಅನಧಿಕೃತ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ

Written by malnadtimes.com

Published on:

ಹೊಸನಗರ ; ಮಾ.23ರ ಭಾನುವಾರ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು 10ನೇ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ರಾಜ್ಯ ಯಕ್ಷಗಾನ ಅಕಾಡೆಮಿಯ ನಿರ್ದೇಶಕ, ಸಾಹಿತಿ ಡಿ.ಎಸ್.ಶ್ರೀಧರ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ತಾಲೂಕಿನ ನಿಟ್ಟೂರು ಸಮೀಪದ ಧರೆಮನೆಯ ಅವರ ನಿವಾಸಕ್ಕೆ ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ನೇತೃತ್ವದಲ್ಲಿ ಶುಕ್ರವಾರ ಭೇಟಿ ನೀಡಿ ಅಧಿಕೃತ ಆಹ್ವಾನ ನೀಡಿದರು.

ಹಿರಿಯ ಸಾಹಿತಿ ಡಾ.ಶಾಂತಾರಾಮ ಪ್ರಭು, ಕರ‍್ಯದರ್ಶಿ ಕುಬೇಂದ್ರಪ್ಪ, ಅರೆಮನೆ ವಿನಾಯಕ, ಅಶ್ವಿನಿ ಪಂಡಿತ್, ಎಚ್.ಆರ್.ಶ್ರೀಕಂಠ ಮತ್ತಿತರರು ಇದ್ದರು.


ಅನಧಿಕೃತ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ

ಹೊಸನಗರ ; ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀತಮ್ಮ ಕೋಂ ಗೋವಿಂದಪ್ಪ ಎಂಬುವವರ ಜಾಗವೆಂದು ತಿಳಿದಿದ್ದರೂ ನ್ಯಾಯಾಲಯದಲ್ಲಿ ಸೀತಮ್ಮನವರ ಪರ ತಡೆಯಾಜ್ಞೆ ಇದ್ದರೂ ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರರವರ ಪರವಾಗಿ ನಾಗರಕೊಡಿಗೆ ಗಣೇಶ್‌ಮೂರ್ತಿಯವರು ಸಭೆಗಳನ್ನು ನಡೆಸಿ ಊರಿನವರು ಎಲ್ಲರೂ ಒಟ್ಟಾಗಿ ಹೋಗಿ ಚಂದ್ರಶೇಖರ್ ರವರ ಪರವಾಗಿ ಮನೆ ನಿರ್ಮಿಸೋಣ ಎಂದು ತ್ರಿಣಿವೆ ಗ್ರಾಮ ಪಂಚಾಯತಿಯಲ್ಲಿ ಗಲಭೆಗೆ ಅವಕಾಶ ಮಾಡಿಕೊಡುತ್ತಿರುವುದನ್ನು ವಿರೋಧಿಸಿ ಅದೇ ಗ್ರಾಮದ ನಿವಾಸಿಗಳಾದ ಎನ್ ಪ್ರಕಾಶಶೆಟ್ಟಿ ಹಾಗೂ ನರೇಂದ್ರಕುಮಾರ್‌ರವರು ಖಂಡಿಸಿದ್ದಾರೆ.

ಅವರು ಹೊಸನಗರ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಮನವಿ ಪತ್ರದಲ್ಲಿ ತ್ರಿಣಿವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ನ್ಯಾಯ ಪಂಚಾಯತ್ ಮಾಡಿರುತ್ತಾರೆ ಎಂಬ ರೀತಿಯಲ್ಲಿ ಒಂದು ಪತ್ರ ಬರಹವು ಸಾರ್ವಜನಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನಾವುಗಳು ಪರಿಶೀಲಿಸಲಾಗಿ ಈ ಪತ್ರವನ್ನು ಮಾ.19 ರಂದು ಬುಧವಾರ ಬೆಳಿಗ್ಗೆ 10-30ರ ಸಮಯಕ್ಕೆ ಕಲಾನಾಥೇಶ್ವರ ದೇವಸ್ಥಾನ ತ್ರಿಣಿವೆ ಇಲ್ಲಿ ಒಂದು ನಾಲ್ಕಾರು ಜನರ ಸಭೆ ಸೇರಿಸಿ ಒಂದು ಸ್ವಹಿತಾಸಕ್ತಿ ಮತ್ತು ತನ್ನ ಸ್ವಂತ ಇಷ್ಟಾನುಸಾರ ತೀರ್ಮಾನವೆಂಬಂತೆ ತ್ರಿಣಿವೆ ಗ್ರಾಮದ ಗಣೇಶ್‌ಮೂರ್ತಿ ಮತ್ತು ಇತರರು ಒಂದು ತೀರ್ಮಾನ ಮಾಡಿರುತ್ತೇವೆ ಎಂಬ ಒಂದು ಪತ್ರ ಬರಹವನ್ನು ಬರೆದು ಕೆಲವು ಗ್ರಾಮಸ್ಥರ ಸಹಿ ಹಾಕಿಸಿರುವುದು ನಮ್ಮಗಳ ಗಮನಕ್ಕೆ ಬಂದಿರುತ್ತದೆ. ಅಂದರೆ ಇದೇ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಎಂಎನ್ ಇವರು ಕಂದಾಯ ಭೂಮಿಯನ್ನು ಅನಧಿಕೃತವಾಗಿ ಕಬಳಿಸುತ್ತಿರುವ ಬಗ್ಗೆ ನಾವುಗಳು ಈ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿರುತ್ತೇವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿರುವುದು ಕೂಡ ಇರುತ್ತದೆ. ಇದೆಲ್ಲವನ್ನು ಉಲ್ಲಂಘಿಸಿ ತ್ರಿಣಿವೆ ಗ್ರಾಮದ ಗಣೇಶ್‌ಮೂರ್ತಿ ಮತ್ತು ಇತರರು ತಾವೇ ನ್ಯಾಯಾಧೀಶರೇನೋ ಎಂಬ ರೀತಿಯಲ್ಲಿ ತೀರ್ಪು ಕೊಡುವ ರೀತಿಯಲ್ಲಿ ಒಂದು ಪತ್ರ ಬರಹವನ್ನು ಬರೆಸಿ, ಕಂದಾಯ ಭೂಮಿಯನ್ನು ಅನಧಿಕೃತವಾಗಿ ಕಬಳಿಸುವುದಕ್ಕೆ ಕುಮ್ಮಕ್ಕು ನೀಡಿರುತ್ತಾರೆ.

ತ್ರಿಣಿವೆ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಇವರ ಹೆಸರಿನಲ್ಲಿ ಮತ್ತು ಇವರ ಪತ್ನಿ ಹೆಸರಿನಲ್ಲಿ ಯಾವುದೇ ನಿವೇಶನಗಳು ಇಲ್ಲ. ಇವರು ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಇವರಿಗೆ ಜಾಗವೇ ಇಲ್ಲವೆಂದು ಹೇಳಿಕೆ ನೀಡಿರುತ್ತಾರೆ. ಆದರೆ ತ್ರಿಣಿವೆ ಗ್ರಾಮದ ಗೀತಾ ಕೋಂ ಚಂದ್ರಶೇಖರ ಇವರ ಹೆಸರಿನಲ್ಲಿ ಅಧಿಕೃತ ನಿವೇಶನವಿರುವ ದಾಖಲೆಗಳು ಕೂಡ ನಮ್ಮಲ್ಲಿ ಲಭ್ಯವಿದೆ ಹಾಗೂ ಇವರಿಗೆ ಅಧಿಕೃತ ನಿವೇಶನವು ಇರುತ್ತದೆ. ಆದರೆ ಗಣೇಶ್‌ಮೂರ್ತಿ ಇವರು ಮತ್ತು ಇತರರ ಸ್ವಹಿತಾಸಕ್ತಿಗೆ ಬೇಕಾದಂತೆ ಇವರಿಗೆ ನಿವೇಶನವೇ ಇಲ್ಲ ಇವರು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಲ್ಲಿ ಅನಧಿಕೃತವಾಗಿ ಮನೆಗೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ನಮ್ಮ ಸಹಕಾರವಿದೆ. ನಾವುಗಳು ಇವರಿಗೆ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಮುಂದೆ ನಿಂತು ಮಾಡಿಸುತ್ತೇವೆ ಎಂಬ ರೀತಿಯಲ್ಲಿ ಪತ್ರ ಬರಹವನ್ನು ಬರೆಸಿ ತಮ್ಮ ಸಹಿಯನ್ನು ನಮೂದಿಸಿರುತ್ತಾರೆ.

ಈ ಅನಧಿಕೃತ ಜಾಗವೆಂದು ತಿಳಿದರೂ ಕೂಡ ಒಬ್ಬ ಬುದ್ಧಿ ಜೀವಿಯಾಗಿ ಕಾನೂನು ತಿಳುವಳಿಕೆವುಳ್ಳವರಾಗಿ ಈ ರೀತಿ ಅನಧಿಕೃತ ಕೆಲಸಕ್ಕೆ ಅಧಿಕೃತವಾಗಿ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ ಮತ್ತು ಗ್ರಾಮ ಭಾಗದಲ್ಲಿ ನಿವೇಶನ ರಹಿತರು ಬಹಳಷ್ಟು ಜನರಿದ್ದು ಇವರುಗಳಿಗೂ ಕೂಡ ಈ ರೀತಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಡಲಿ ಎಂಬಂತಹ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ. ಮತ್ತು ಕೇವಲ ನಾಲ್ಕಾರು ಮಂದಿ ಕುಳಿತು ಈ ರೀತಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ಗ್ರಾಮಸ್ಥರಿಗೆ ಅವಮಾನ ಮಾಡಿರುತ್ತಾರೆ. ಈ ರೀತಿ ತೀರ್ಮಾನಗಳಿಗೆ ಬಹಳಷ್ಟು ಜನ ಗ್ರಾಮದ ಹಿರಿಯ ನಾಗರೀಕರು ಮತ್ತು ಬುದ್ಧಿಜೀವಿಗಳ ಆಕ್ಷೇಪವು ಇರುತ್ತದೆ.

ಗಣೇಶ್‌ಮೂರ್ತಿ ಮತ್ತು ಈ ರೀತಿ ಪತ್ರಕ್ಕೆ ಸಹಿ ಹಾಕಿರುವ ಇತರರಿಗೆ ಇವರುಗಳ ಮೇಲೆ ಇಷ್ಟೊಂದು ಅನುಕಂಪವಿದ್ದರೆ ತಮ್ಮ ಸ್ವಂತ ಖಾತೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಡಬಹುದಾಗಿತ್ತು ಒಬ್ಬ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ ಅನಧಿಕೃತವಾಗಿ ಕಂದಾಯ ಭೂಮಿಯನ್ನು ಕಬಳಿಸುವುದಕ್ಕೆ ಅಧಿಕೃತವಾಗಿ ಅವರಿಗೆ ನಿವೇಶನ ಇದ್ದರೂ ಕೂಡ ಅನಧಿಕೃತವಾಗಿ ಕೆಲಸ ಮಾಡಿ ನಮ್ಮ ಸಹಕಾರವಿದೆ ಎಂದು ಹೇಳುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ತಾವುಗಳು ತಾಲ್ಲೂಕು ದಂಡಾಧಿಕಾರಿಗಳಾಗಿದ್ದು ಈ ರೀತಿ ತೀರ್ಮಾನವನ್ನು ತೆಗೆದುಕೊಳ್ಳುವುದು ನಿಮ್ಮ ಅಧಿಕಾರಕ್ಕೆ ಇವರುಗಳು ವಿರುದ್ಧವಾಗಿ ನಡೆದುಕೊಂಡಂತಾಗಿರುತ್ತದೆ.

ಈ ರೀತಿ ತೀರ್ಮಾನವನ್ನು ಗ್ರಾಮಸ್ಥರೇ ತೆಗೆದುಕೊಳ್ಳವುದು ಗ್ರಾಮ ಭಾಗದಲ್ಲಿ ಪರ ವಿರೋಧ ಎಂಬ ರೀತಿಯಲ್ಲಿ ಜಗಳ ದೊಂಬಿ ಗಲಾಟೆ ನಡೆದು ಗ್ರಾಮ ಭಾಗದಲ್ಲಿ ಅಶಾಂತಿವುಂಟಾಗುತ್ತದೆ. ಆದ್ದರಿಂದ ತಾವುಗಳು ಈ ಕ್ರಮಕ್ಕೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಂದು ತಹಶೀಲ್ದಾರ್‌ರವರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Leave a Comment