Hosanagara

ಮುಂಬರುವ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಕವರಿ ಗ್ರಾಮಸ್ಥರು !

HOSANAGARA ; ತಾಲ್ಲೂಕಿನ ಮಾಸ್ತಿಕಟ್ಟೆ ಯಡೂರು ಗ್ರಾಮ ಪಂಚಾಯಿತಿ ಕವರಿಯಿಂದ ಕೋಳೂರು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ರಸ್ತೆಗೆ ಡಾಂಬರೀಕರಣ ಮಾಡದಿದ್ದರೆ ಮುಂಬರುವ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಅಲ್ಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕವರಿಯಿಂದ ಕೋಳೂರು ಗ್ರಾಮಕ್ಕೆ ಸುಮಾರು 2 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದ್ದು ಇಲ್ಲಿನ ಗ್ರಾಮ ಪಂಚಾಯತಿ ಆಡಳಿತ ವರ್ಗ ಈ ರಸ್ತೆಗೆ ಬರೀ ಮಣ್ಣು ಹಾಕಿ ಹಣ ಬಿಡುಗಡೆ ಮಾಡಿಕೊಳ್ಳುತ್ತಿದ್ದರೆಯೇ ಹೊರತು ಇಲ್ಲಿನ ನಿವಾಸಿಗಳಿಗೆ ಓಡಾಟದ ದೃಷ್ಠಿಯಿಂದ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಈ ರಸ್ತೆಗೆ ಪುರಾತನ ಕಾಲದ ಇತಿಹಾಸವಿದೆ. ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರುವ ಈ ರಸ್ತೆ, ಅಭ್ಯರ್ಥಿಗಳು ಚುನಾವಣೆಯ ಸಂದರ್ಭದಲ್ಲಿ ಬಂದು ಓಟು ಕೇಳುವಾಗ ನಾನು ಗೆದ್ದರೆ ಖಂಡಿತ ರಸ್ತೆ ರಿಪೇರಿ ಮಾಡಿಸಿಕೊಡುತ್ತೇವೆ ಎಂದು ಹೋಗುತ್ತಾರೆ. ಗೆದ್ದ ಮೇಲೆ ಈ ಕಡೆ ಮುಖ ಹಾಕದಿರುವುದು ವಿಪರ್ಯಾಸ. ಮುಂದಿನ ಚುನಾವಣೆಯಲ್ಲಿ ಮತ್ತೆ ಓಟು ಕೇಳಲು ರಾಜಕೀಯ ನಾಯಕರು ಬರುತ್ತಾರೆ. ಈಗಾಗಲೇ 10 ವಿಧಾನಸಭಾ ಚುನಾವಣೆ ನಡೆದರೂ ಬರೀ ಆಶ್ವಾಸನೆಯಾಗಿಯೇ ಉಳಿದಿದ್ದು ರಸ್ತೆ ರಿಪೇರಿ ಮಾಡಿಕೊಡದೇ ಹೋದಲ್ಲಿ ಮುಂದೆ ನಡೆಯುವ ಎಲ್ಲ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಅಲ್ಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>