ಶಿವಮೊಗ್ಗ

ಬೆಂಗಳೂರು ಬೆಳೆಸಿದ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯು ಇಂದಿಗೂ ಪ್ರೇರಣೆಯ ಬೆಳಕು: ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ:ರಾಜ್ಯದ ಐತಿಹಾಸಿಕ ನಾಯಕ ಮತ್ತು ಬೆಂಗಳೂರು ನಗರದ ಸ್ಥಾಪಕರಾದ ನಾಡಪ್ರಭು ಶ್ರೀ ಕೆಂಪೇಗೌಡರು ತಮ್ಮ ವಿಶಿಷ್ಟ ದಿಗ್ಗಜತನದಿಂದ ನಗರೀಕರಣ ಮತ್ತು ಜನಸೇವೆಗೆ ಮಾದರಿ ರೂಪದರ್ಶನ ನೀಡಿದವರು. ಈ ಮಹಾನ್ ನಾಯಕನ ಬಾಳ್ವೆ ಮತ್ತು ಸಾಧನೆ ಇಂದಿನ ಯುವ ಪೀಳಿಗೆಗೆ ದಿಕ್ಕು ತೋರುವ ದೀಪವಾಗಿದ್ದು, ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ಅವರ ತತ್ವಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ನಡೆದ 516ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲತೀತ ನಿಸ್ವಾರ್ಥ ನಾಯಕತ್ವ

ಈ ದೇಶವನ್ನು ಅನೇಕರು ಆಳ್ವಿಕೆ ಮಾಡಿದ್ದಾರೆ. ಆದರೆ ನಮ್ಮ ನೆನಪಿನಲ್ಲಿ ಸದಾ ಉಳಿಯುವುದು ಕೆಂಪೇಗೌಡ ಆಳ್ವಿಕೆಯ ಕಾಲ. ಹಾಗಾಗಿ ಬೆಂಗಳೂರು ಅಂದರೆ ನಮ್ಮ ಕಣ್ಣ ಮುಂದೆ ಬರುವ ಚಿತ್ರಣ ಕೆಂಪೇಗೌಡರದು. ಇವರು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲೆ ರಾಜ್ಯದ ಅಭಿವೃದ್ದಿಗಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ಆ ದೂರದೃಷ್ಟಿಯ ಆಲೋಚನೆಯಿಂದ ಭವಿಷ್ಯ ಬೆಂಗಳೂರನ್ನು ಕಟ್ಟಿದ್ದಾರೆ. ಕೆಂಪೇಗೌಡರು ನಾಗರೀಕ ಸಮಾಜಕ್ಕೆ ಏನು ಬೇಕು, ಏನು ಬೇಡ ಎಂಬುದನ್ನು ಅರಿತ್ತಿದ್ದರು.

ಅವರು ಕಟ್ಟಿದ ಬುನಾದಿಯಲ್ಲಿ ಇಂದಿನ ಬೆಂಗಳೂರು

ಬೆಂಗಳೂರಿನ ಅಭಿವೃದ್ಧಿಗೆ ಗಟ್ಟಿಯಾದ ಬುನಾದಿಯನ್ನು ಹಾಕಿದ ಕೆಂಪೇಗೌಡರ ಕೊಡುಗೆ ಅನನ್ಯ. ಅವರ ಕಾಲದಲ್ಲೆ ರಸ್ತೆಗಳು ನೇರವಾಗಿ ಆಗಸವನ್ನು ನೋಡಬಲ್ಲಂತೆ ಸಮರೇಖೆಯಲ್ಲಿ ನಿರ್ಮಾಣಗೊಂಡಿದ್ದವು ಎಂಬುದು ವಿಶೇಷ. ಅವರು ಕಟ್ಟಿದ ಚೆನ್ನಕೇಶವ ದೇವಸ್ಥಾನಗಳು, ಬಸ್ಸಪ್ಪನಕೆರೆ, ಕೆಂಪಾಂಬುಧಿ ಕೆರೆ ಮುಂತಾದ ಕೆರೆಗಳು ಮತ್ತು ಮಾರುಕಟ್ಟೆಗಳು ಅವರ ದೂರದೃಷ್ಟಿಯ ಸಾಕ್ಷ್ಯಗಳಾಗಿವೆ.

“ರಾಜ್ಯ ಹಾಗೂ ದೇಶದ ಇತಿಹಾಸದಲ್ಲಿ ನಾಡಪ್ರಭು ಕೆಂಪೇಗೌಡರು ಅತ್ಯಂತ ವಿಶಿಷ್ಟ ಸ್ಥಾನ ಪಡೆದ ಮಹಾನ್ ನಾಯಕರಾಗಿದ್ದಾರೆ. ಅವರ visionary leadership ಮಾತ್ರವಲ್ಲದೆ, ಎಲ್ಲ ವರ್ಗದ ಜನರನ್ನೂ ಒಳಗೊಂಡ ಸಮಾನತೆಯ ಆಧಾರಿತ ನಗರ ನಿರ್ಮಾಣದ ಕನಸು ಇಂದಿಗೂ ಸ್ಪೂರ್ತಿಯಾಗಿದೆ,” ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ.ಎ.ರಮೇಶ್ ಹೆಗಡೆ ಮಾತನಾಡಿ, ಕೆಂಪೇಗೌಡರು ಉತ್ತಮ ಆಡಳಿತಗಾರರಲ್ಲದೆ ವಾಸ್ತುಶಿಲ್ಪಿಯೂ ಆಗಿದ್ದರು. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕೋಟೆ, ಕೆರೆ, ಕಟ್ಟೆ ಕಟ್ಟಿಸಿದರು, ಮಾರುಕಟ್ಟೆ ಕಟ್ಟಿದ್ದರು. ಆ ಮೂಲಕ ಸುಂದರ, ಸೌಹಾರ್ಧ ರಾಜ್ಯವನ್ನು ನಿರ್ಮಿಸಿದರು. ವರ್ತಮಾನದಲ್ಲಿ ಬೆಂಗಳೂರಿಗೆ ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣಕರ್ತರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ, ತಾಲ್ಲೂಕು ಒಕ್ಕಲಿಗ ಸಂಘದ ಎ.ಎಸ್.ಚಂದ್ರಕಾ0ತ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಭೂಮರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಉಪಸ್ಥಿತರಿದ್ದರು.

Read More :ಈ ಸಮುದಾಯದವರಿಗೆ ಸಿಗಲಿದೆ ₹5 ಲಕ್ಷವರೆಗೆ ಸಾಲ । ಅರ್ಜಿ ಸಲ್ಲಿಸುವುದು ಹೇಗೆ ?

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650