ಹೊಸನಗರ

ಕೆಂಚನಾಲ ಮಾರಿಕಾಂಬಾ ದೇವಿ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ

InShot 20260811 141710117

ರಿಪ್ಪನ್‌ಪೇಟೆ : ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬಾ ದೇವಿಯ ವೈಭವದ ಜಾತ್ರಾ ಮಹೋತ್ಸವಕ್ಕೆ ಭಕ್ತ ಜನಸಾಗರ ಭಕ್ತಿಯಿಂದ ಭಾಗವಹಿಸಿ ದೇವಿಗೆ ಹರಿಕೆ ಕಾಣಿಕೆ ಸಮರ್ಪಿಸಿ ಸಂಭ್ರಮಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಮುಂಜಾನೆಯಿಂದಲೇ ದೇವಸ್ಥಾನದ ಮುಂಭಾಗ ಭಕ್ತ ಸಮೂಹ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತು ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಭಕ್ತರು ಹಣ್ಣು-ಕಾಯಿ ಹರಕೆ ಸಮರ್ಪಿಸಿ ತಮ್ಮ ಭಕ್ತಿಯ ಪರಾಕಾಷ್ಟೆತೆಯನ್ನು ಮೆರೆದರು.

ಈ ಜಾತ್ರಾ ಮಹೋತ್ಸವದಲ್ಲಿ ಮಸರೂರು, ಕೆಂಚನಾಲ, ಬೆಳಂದೂರು, ಲಕ್ಕವಳ್ಳಿ, ಆಲವಳ್ಳಿ, ಕಮದೂರು, ಮಾದಾಪುರ, ಹಾಲುಗುಡ್ಡೆ, ಬಾಳೂರು, ರಿಪ್ಪನ್‌ಪೇಟೆ, ಬೆನವಳ್ಳಿ, ಅರಸಾಳು, ಆಯನೂರು, ಹುಂಚ, ಕೋಡೂರು, ಗರ್ತಿಕೆರೆ, ಆನಂದಪುರ, ಸಾಗರ, ಹೊಸನಗರ, ಶಿವಮೊಗ್ಗ ಹೀಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನಾಶೀರ್ವಾದ ಪಡೆದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಿಹಿ ತಿಂಡಿ, ಖಾರ ಮಂಡಕ್ಕಿ, ಅಂಗಡಿಗಳು ಮತ್ತು ಸ್ಟೇಷನರಿ ಸಾಮಾನುಗಳು, ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟ, ಹೂವು-ಹಣ್ಣು ಭರ್ಜರಿ ವ್ಯಾಪಾರ ಸೇರಿದಂತೆ ಹೆಣ್ಣು ಮಕ್ಕಳು, ನವಜೋಡಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಂತಾನ ಭಾಗ್ಯ ಮತ್ತು ಕಲ್ಯಾಣ ಭಾಗ್ಯ ಕರುಣಿಸಲೆಂದು ಮಾರಿಕಾಂಬಾ ದೇವಿಯಲ್ಲಿ ಹರಕೆ ಇಟ್ಟು ಪ್ರಾರ್ಥಿಸಿದ ದೃಶ್ಯ ವಿಶೇಷವಾಗಿತ್ತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]