ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಬೇಸಿಗೆ ಜಾತ್ರಾ ಮಹೋತ್ಸವವು ಜನವರಿ 22 ರಂದು ಬುಧವಾರ ನಡೆಯಲಿದೆ.
ಅಂದು ಬೆಳಗ್ಗೆ 6 ರಿಂದ ದೇವಿಗೆ ವಿಶೇಷ ಪೂಜೆ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಳ್ಳುವುದು. ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುವ ಈ ಜಾತ್ರೆಯು ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧವಾರದಂದು ಆಚರಿಸುವುದು ಇಲ್ಲಿನ ವಿಶೇಷ.
ರೈತರು ತಮ್ಮ ಜಮೀನಿನಲ್ಲಿ ಹಾಕಲಾದ ಬೆಳೆ ಸಂವೃದ್ದಿಯಾಗಿ ಬೆಳೆದು ಕಾಡು ಪ್ರಾಣಿ, ಪಕ್ಷಿಗಳಿಂದ ಹಾಗೂ ರೋಗ ಬಾರದಂತೆ ಬೆಳೆ ರಕ್ಷಣೆ, ಜಾನುವಾರುಗಳಿಗೂ ರೋಗ ಹರಡದಂತೆ ಮಾಡುವಂತೆ ದೇವಿಯಲ್ಲಿ ಹರಕೆ ಸಲ್ಲಿಸುತ್ತಾರೆ. ಇದರೊಂದಿಗೆ ಮದುವೆಯಾಗದ ಹೆಣ್ಣು ಮಕ್ಕಳು ವಿವಾಹ ಯೋಗ ಕರುಣಿಸಲೆಂದು, ಸಂತಾನ ಭಾಗ್ಯ ಹೀಗೆ ಯಾವುದೇ ಕಷ್ಟ ಕಾರ್ಪಣ್ಯಗಳು ಬಾರದಂತೆ ದೇವಿಯಲ್ಲಿ ಪ್ರಾರ್ಥಿಸುವುದು ಇಲ್ಲಿನ ವಿಶೇಷ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.