HOSANAGARA | ಅತಿವೃಷ್ಠಿಯಿಂದ ಆಗುತ್ತಿರುವ ಹಾನಿಗೆ ತಾಲೂಕಿನ ಜನಸಾಮಾನ್ಯರು ತತ್ತರಿಸಿದ್ದಾರೆ. ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರೇರಿ ಬಾಳೆಸರದಲ್ಲಿ ಕೆರೆ ದಂಡೆಗೆ ಹಾನಿಯಾಗಿದೆ. ದಂಡೆಯ ನಡುವೆ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದು, ಕೆರೆಯ ಹೆಚ್ಚುವರಿ ನೀರು ಇದರ ಮೂಲಕ ಹರಿಯಲಾರಂಭಿಸಿದೆ. ಮಳೆ ಹೆಚ್ಚಾದಲ್ಲಿ ದಂಡೆ ಸಂಪೂರ್ಣ ಒಡೆಯುವ ಸಾಧ್ಯತೆ ಕಂಡುಬಂದಿದೆ.
ಕೆರೆಯ ದಂಡೆಯ ಕೆಳಭಾಗದಲ್ಲಿ ಕೃಷಿ ಜಮೀನು ಇದ್ದು, ಇಲ್ಲಿನ ನಿವಾಸಿಗಳು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.
ತಹಸೀಲ್ದಾರ್ ರಶ್ಮಿ, ತಾಪಂ ಇಓ ನರೇಂದ್ರಕುಮಾರ್, ಗ್ರಾಪಂ ಅಧ್ಯಕ್ಷೆ ದೀಪಿಕಾ, ಪಿಡಿಓ ಜಾನ್‌ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ದುರ್ಗಮ ಪ್ರದೇಶದ ಸ್ಥಳವಾಗಿದ್ದು, ವಾಹನ ಸಂಚಾರಕ್ಕೆ ರಸ್ತೆ ಸುಗಮವಾಗಿಲ್ಲ. ಈ ಹಿನ್ನೆಲೆಯಲ್ಲಿ ತುರ್ತು ಕಾರ‍್ಯ ಕೈಗೊಳ್ಳುವುದು ಸವಾಲಿನ ಕೆಲಸವಾಗಿದೆ.
ತತ್ಕಾಲಿಕ ದುರಸ್ಥಿ :
ಅಧಿಕಾರಿಗಳು ಸ್ಥಳ ತನಿಖೆಯಾದ ಮೇಲೆ ಮಾರುತಿಪುರ ಗ್ರಾಮ ಪಂಚಾಯಿತಿಯವರು ತತ್ಕಾಲಿಕವಾಗಿ ಜೆಸಿಬಿ ಯಂತ್ರದ ಮೂಲಕ ದುರಸ್ಥಿ ಕಾರ್ಯ ಕೈಗೊಂಡಿದ್ದಾರೆ.
ಅಡಿಕೆ ಗ್ರಾಹಕರೊಂದಿಗೆ ಕ್ಯಾಂಪ್ಕೋ ಸಂಸ್ಥೆ ಸದಾ ಜೊತೆಗಿರುತ್ತದೆ : ರಾಘವೇಂದ್ರ
HOSANAGARA | ಅಡಿಕೆ ಗ್ರಾಹಕರೊಂದಿಗೆ ಸದಾ ಕ್ಯಾಂಪ್ಯೋ ಸಂಸ್ಥೆ ಜೊತೆಗಿದ್ದು ಅವರ ಕಷ್ಟ-ಸುಖಗಳಿಗೆ ಸದಾ ಬಾಗಿಯಾಗಿರುತ್ತದೆ ಎಂದು ಕ್ಯಾಂಪ್ಕೋ ಸಂಸ್ಥೆಯ ನಿರ್ದೆಶಕರಾದ ಹೆಚ್.ಎಂ ರಾಘವೇಂದ್ರ ಹೇಳಿದರು.
ಪಟ್ಟಣದ ಕ್ಯಾಂಪ್ಕೋ ಸಂಸ್ಥೆಯ ಆವರಣದಲ್ಲಿ ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇವರ ಆಶ್ರಯದಲ್ಲಿ ‘ಸದಸ್ಯರ ಚಿತ್ತ ಆರೋಗ್ಯ ದತ್ತ ಕ್ಯಾಂಪ್ಕೋ ಚಿತ್ತ’ ಎಂಬ ಯೋಜನೆಯಡಿಯಲ್ಲಿ ಹೊಸನಗರ ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯರಾದ ನಂಜುಂಡಪ್ಪ ಗೌಡ ಅರಳಿಕೊಪ್ಪ ಇವರ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಕ್ಯಾಂಪ್ಕೋ ಸಂಸ್ಥೆ ವತಿಯಿಂದ 43502 ರೂಪಾಯಿಗಳ ಚೆಕ್‌ನ್ನು ವಿತರಿಸಿ ಮಾತನಾಡಿದರು.
ಕ್ಯಾಂಪ್ಕೋ ಸಂಸ್ಥೆ ಸದಸ್ಯರ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದು ಸದಸ್ಯರೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಂಡ ಸಂಸ್ಥೆಯಾಗಿದೆ ನಮ್ಮ ಸಂಸ್ಥೆಯ ಸದಸ್ಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾದರೇ ಸದಸ್ಯರ ಸಹಾಯಕ್ಕೆ ನಿಲ್ಲುವ ಸಂಸ್ಥೆಯಾಗಿದೆ ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣ ಮಟ್ಟದ ಉತ್ಪಾದನೆ ಕೇಂದ್ರಗಳಿದ್ದು ನಾವು ನಿಮ್ಮೊಂದಿಗೆ ಸೇರಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಗುರಿಯನ್ನು ಹೊಂದಿದ್ದು ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಿವಮೊಗ್ಗ ಪ್ರಾಂತಿಯ ಮಾರುಕಟ್ಟೆ ವ್ಯವಸ್ಥಾಪಕರಾದ ಎನ್ ರತ್ನಾಕರ್, ಕ್ಯಾಂಪ್ಕೋ ಹೊಸನಗರ ಶಾಖೆಯ ಶಾಖಾಧಿಕಾರಿ ಪಿ. ಉಮೇಶ್, ಸಿಬ್ಬಂದಿಯಾದ ರವಿರಾಜ್, ಅಕ್ಷಯಕುಮಾರ್, ಸುದರ್ಶನ್ ಹಾಗೂ ಕ್ಯಾಂಪ್ಕೋ ಸಿಬ್ಬಂದಿಗಳು ಉಪಸ್ಥಿತರಿದ್ದರು.