ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸೈದ್ಧಾಂತಿಕ ಗೆಲುವಲ್ಲ ; ಮಾಜಿ ಸಚಿವ ಕಿಮ್ಮನೆ ರತ್ನಾಕರ್

Written by malnadtimes.com

Published on:

Hosanagara | ತಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದು ಕಾಂಗ್ರೆಸ್‌ (Congress) ಕಾರ್ಯಕರ್ತರು ಭ್ರಮನಿರಸನಗೊಳ್ಳುವ ಅಥವಾ ಅಧೀರರಾಗುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ (Kimmane Rathnakar) ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಇಲ್ಲಿನ ಗಾಂಧಿಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಒಂದು ವ್ಯವಸ್ಥೆಯ ಬದಲಾವಣೆಗೆ ಕೆಲವೊಮ್ಮೆ ಶತಮಾನಗಳೇ ಉರುಳಿದ ಅದೆಷ್ಟೋ ಉದಾಹರಣೆಗಳು ಪ್ರಪಂಚದಲ್ಲಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೂ, ಈ ಬಾರಿಯ ಚುನಾವಣೆಯಲ್ಲಿ ಅವರದ್ದು ಸೈದ್ಧಾಂತಿಕ ಗೆಲುವಲ್ಲ ಎಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಾರದಿದ್ದರೂ, ಈ ಬಾರಿ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ. ಇದೊಂದು ತಾತ್ಕಾಲಿಕ ಹಿನ್ನಡೆಯಷ್ಟೇ ಎನ್ನುವುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕೆಂದರು.

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆೆಪಿ ಜನರ ಭಾವನೆಗಳನ್ನು ಕೆಣಕುವ ಮೂಲಕ ಮತಗಳನ್ನು ತನ್ನತ್ತ ಧೃವೀಕರಣಗೊಳಿಸಿದೆ. ಅಲ್ಲದೇ ಹಣ, ಹೆಂಡದ ಆಮಿಷಗಳನ್ನು ಮತದಾರರಿಗೆ ನೀಡಲಾಗಿತ್ತು. ಪ್ರತಿ ಬೂತ್ ಹಂತದಲ್ಲಿಯೂ ಚುನಾವಣೆಯ ಹಿಂದಿನ ದಿನ ಹಣದ ಹೊಳೆ ಹರಿಸಲಾಗಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಸಾಮಾನ್ಯ ಮತದಾರರು ಆಮಿಷಗಳಿಗೆ ಒಳಗಾಗಬಹುದು ಎನ್ನುವ ಉದ್ದೇಶದಿಂದಲೇ ವಿದ್ಯಾವಂತರು, ಶಿಕ್ಷಕ ಮತದಾರರನ್ನು ಒಳಗೊಂಡ ವಿಧಾನ ಪರಿಷತ್ ಅಸ್ಥಿತ್ವದಲ್ಲಿದೆ. ಆದರೆ ವಿದ್ಯಾವಂತರೂ ಆಮಿಷಗಳಿಗೆ ಬಲಿಯಾಗುತ್ತಿರುವುದು ದುರಂತ ಎಂದರು.

ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರಕಾರದ ಯಶಸ್ವಿ ಯೋಜನೆಗಳು. ಆ ಯೋಜನೆಗಳು ಲೋಕಸಭೆ ಚುನಾವಣೆಗೆ ಪಕ್ಷಕ್ಕೆ ಹೆಚ್ಚಿನ ವರವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರ ನಿರೀಕ್ಷೆಗಳು ಬೇರೆಯದೇ ಇರುತ್ತದೆ. ಈಗೇನಾದರೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದರೆ, ಕಾಂಗ್ರೆಸ್‌ಗೆ 160ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಪ್ರಮುಖರಾದ ಬಿ.ಆರ್.ಪ್ರಭಾಕರ, ಅಶ್ವಿನಿಕುಮಾರ್, ಬಿ.ಜಿ.ನಾಗರಾಜ್, ಕರುಣಾಕರ ಶೆಟ್ಟಿ, ಮಹಮದ್‌ಇಕ್ಬಾಲ್, ಮೋಹನಶೆಟ್ಟಿ, ಟೌನ್ ಅಧ್ಯಕ್ಷ ಗುರುರಾಜ್, ಜಯನಗರ ಗುರು, ಉಬೇದುಲ್ಲಾ, ನೇತ್ರಾ ಸುಬ್ರಾಯಭಟ್, ಮತ್ತಿತರರು ಇದ್ದರು.

Read More

ಗೀತಾ, ಮಧು ವಿರುದ್ಧ ಫೇಸ್‌ಬುಕ್‌ನಲ್ಲಿ ಸುಧೀರ್ಘ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ ಕುಮಾರ್ !

Leave a Comment