ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘ ಕೋಟ್ಯಂತರ ರೂ. ವಂಚನೆ ವದಂತಿ ಸತ್ಯಕ್ಕೆ ದೂರ ; ಹೆಚ್.ಎಂ. ರಾಘವೇಂದ್ರ

Written by Mahesha Hindlemane

Published on:

ಹೊಸನಗರ ; ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಕೋಟ್ಯಂತರ ರೂ. ವಂಚನೆ ಎಂಬ ವದಂತಿ ಸತ್ಯಕ್ಕೆ ದೂರವಾಗಿದೆ ಎಂದು ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಎಂ. ರಾಘವೇಂದ್ರ ಸ್ವಷ್ಟಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಹಕಾರಿ ಸಂಘವು ರೈತರಿಗೆ ಸಾಲ ಬೇಕಿಲ್ಲದಿದ್ದರೂ ಕಡಿಮೆ ಬಡ್ಡಿ ದರಕ್ಕೆ ಜಮೀನು ಅಡಮಾನ ಸಾಲ ಕೋಡುತ್ತೇವೆ ಎಂದು ಪುಸಲಾಯಿಸಿ ಜಮೀನು ದಾಖಲೆ ಮೂಲಕ ಉಪನೋಂದಾವಣಿ ಕಛೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂಬುದಾಗಿ ಹೇಳಿದ್ದು ಅಂತಹ ಯಾವುದೇ ಪ್ರಕರಣ ನಡೆದಿಲ್ಲ, ಸಾಲದ ಭದ್ರತೆಗಾಗಿ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಪಡೆಯುವ ಯಾವುದೇ ಪದ್ದತಿ ಸಂಘದಲ್ಲಿಲ್ಲ. ಸಾಲಕ್ಕ ಅರ್ಜಿ ಸಲ್ಲಿಸಿದವರಿಗೆ ಸತಾಯಿಸುವ ಅಥವಾ ಮುಂದಕ್ಕೆ ಹಾಕುವ ಯಾವುದೇ ಕ್ರಮ ನಮ್ಮಲ್ಲಿ ಇರುವುದಿಲ್ಲ. ಅರ್ಜಿ ಬಂದ ತಕ್ಷಣವೇ ಮುಂದಿನ ಸಭೆಯಲ್ಲಿ ಚರ್ಚಿಸಿ ಸಾಲ ಮಂಜೂರು ಮಾಡುವ ಕ್ರಮವಿದ್ದು ಇದೂ ಎಲ್ಲ ರೈತರಿಗೂ ತಿಳಿದಿದ್ದೆ ಆಗಿದೆ. ಮಂಜೂರಾದ ಸಾಲದ ಮೊತ್ತವನ್ನು ಸಾಲಗಾರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಹೊಸನಗರ ತಾಲ್ಲೂಕು ಕುಂಭತ್ತಿಯ ಸರೋಜಮ್ಮ ಮತ್ತು ಹುಂಚ ಹೋಬಳಿ ಕುಕ್ಕೋಡು ಅಗಸರಮನೆ ಕೆ ಪಿ ಕುಮಾರ ಅವರ ಪ್ರಕರಣದಲ್ಲಿ ಸಾಲ ಮಂಜೂರಿಗಾಗಿ ಸಹಕಾರಿಯ ಬ್ಯಾಂಕ್ ಖಾತೆಯಿಂದ ಸಾಲಗಾರರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುತ್ತದೆ. ಅದಕ್ಕೆ ಸಂಬಂಧಿಸಿದ್ದಂತೆ ಸಾಲದ ಖಾತ್ರಿಗಾಗಿ ಸರ್ಕಾರದ ಇಲಾಖೆಯಲ್ಲಿ ನೌಕರರಾಗಿರುವ ಮತ್ತು ಸುಶಿಕ್ಷಿತರಾಗಿರುವ ವ್ಯಕ್ತಿಗಳಿಂದಲೇ ಜಾಮೀನು ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸಾಲಗಾರರ ಪರವಾಗಿ ಬೆಂಗಳೂರಿನ ಸಹಕಾರ ಸಂಘಗಳ ಉಪ ನಿಂಬಂಧಕರು (ನಿ-441) ಸೌಹಾರ್ದ ಸಹಕಾರಿಗಳ ದಾವಾ ಪಂಚಾಯ್ತಿ ನ್ಯಾಯಲಯದಲ್ಲಿ ಸಂಬಂಧಿತರು ವಕೀಲರ ಮೂಲಕ ವಾದವನ್ನು ಮಂಡಿಸಿದ್ದು, ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹೊಸನಗರ ಪರವಾಗಿ ನ್ಯಾಯಲಯದಲ್ಲಿ ತೀರ್ಪು ಬಂದಿರುತ್ತದೆ. ಹೀಗಾಗಿ ಈ ವ್ಯಕ್ತಿಗಳಿಗೆ ತಿಳಿಯದಂತೆ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. 2021 ರಲ್ಲಿ ನಡೆದ ಈ ಪ್ರಕರಣದ ಕುರಿತು ಈಗಾಗಲೇ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಚರ್ಚೆ ನಡೆದಿದೆ ಆಡಳಿತ ಮಂಡಳಿಯು ಇದೇ ಮಾದರಿಯಲ್ಲಿ ಹಲವು ರೈತರ ಹೆಸರಿನಲ್ಲಿ 30 ರಿಂದ 40 ಕೋಟಿ ರೂಪಾಯಿ ಸಾಲ ತೆಗೆದು ಅವ್ಯವಹಾರ ಸಡೆಸಲಾಗಿದೆ ಎಂಬ ವರದಿಯೂ ಸತ್ಯಕ್ಕೆ ದೂರವಾಗಿದೆ.

ಸಂಘದ ಲೆಕ್ಕಪತ್ರಗಳ ಆಡಿಟ್ ಕಾಲಕಾಲಕ್ಕೆ ನಡೆಯುತ್ತಿದ್ದು ಆಡಿಟ್ ವರದಿಗಳನ್ನು ಪ್ರತಿವರ್ಷ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಸಹಕಾರಿ ಸಂಸ್ಥೆಯು ಆರ್ಥಿಕವಾಗಿ ಸದೃಢವಾಗಿದ್ದು ಷೇರುದಾರರಿಗೆ ಉತ್ತಮ ಸೇವೆ ನೀಡುತ್ತಿದ್ದು ನಮ್ಮ ಸಂಸ್ಥೆಯ ವಿರುದ್ದ ಯಾವುದೇ ಅಪನಂಬಿಕೆಗಳಿಂದ ವರದಿಗಳಿಂದ ಯಾವುದೇ ಸದಸ್ಯರು ಗೊಂದಲಕ್ಕೊಳಗಾಬಾರದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Comment