RIPPONPETE ; ನಮ್ಮ ಪೂರ್ವಿಕರು ಜಮೀನಿನಲ್ಲಿ ಬೆಳೆಯನ್ನು ಕಟಾವು ಮಾಡಿದ ನಂತರದಲ್ಲಿ ಉಳಿಯುವ ಕೂಳೆ ಮರು ಬೆಳೆದಂತೆ ನಮ್ಮ ತಾಯಿ ಬಳಗವೂ ವೃದ್ದಿಯಾಗುವಂತಾಲಿ ಎಂಬ ಉದ್ದೇಶದಿಂದ `ಕೂಳೆಪಂಚಮಿ’ಯನ್ನು ಆಚರಣೆಗೆ ತರವ ಮೂಲಕ ಕರುಳಕುಡಿ (ಬಳ್ಳಿ) ವೃದ್ದಿಯಾಗುವಂತಾಗುವಂತೆ ಈ ಹಬ್ಬವನ್ನು ಕುಟುಂಬಸ್ಥರು ಸೇರಿ ಆಚರಿಸುವಂತೆ ಮಾಡಿದ್ದಾರೆಂದು ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ಕೋಮಿನಕೈಯ್ ಗ್ರಾಮದಲ್ಲಿ ಸುಮಾರು 185 ಕುಟುಂಬಗಳು ಒಂದೆಡೆ ಸೇರಿ ಕೂಳೆಪಂಚಮಿ ಆಚರಣೆಯ ಧರ್ಮಸಭೆಯ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಓದಿನೊಂದಿಗೆ ಉದ್ಯೋಗದ ಒತ್ತಡದಲ್ಲಿ ಹಬ್ಬ ಹರಿದಿನಗಳಿಂದ ನಮ್ಮ ಯುವ ಜನಾಂಗ ತಂದೆ-ತಾಯಿ ಸಂಸ್ಕಾರ ಸಂಸ್ಖೃತಿ ಸೇರಿದಂತೆ ಅಣ್ಣ ತಮ್ಮ ಸ್ನೇಹಿತರ ಸಂಬಂಧದಿಂದ ದೂರವಾಗುತ್ತಿದ್ದಾರೆ. ಧರ್ಮ ಧಾರ್ಮಿಕ ಆಚರಣೆಯಿಂದಲೂ ಸಹ ದೂರವಾಗುತ್ತಿರು ಇಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಕರುಳ ಬಳಿ ಇಲ್ಲಿಗೆ ಕೊನೆಯಾಗದೇ ವಿವಾಹ ಮಾಡಿಕೊಟ್ಟ ನಂತರ ಹೆಣ್ಣು ಸಂತಾನಾಭಿವೃದ್ದಿಯೊಂದಿಗೆ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿ ಬೆಳೆಸಿ ಧರ್ಮಾಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಈ ಹಬ್ಬವನ್ನು ಅಚರಣೆಗೆ ತಂದಿದ್ದಾರೆ,ಅದನ್ನು ತಾವು ಮುಂದಿನ ಪೀಳಿಗೆಯಲ್ಲಿ ಪರಿಚಯಿಸಿ ಮುಂದುವರಿಸಿಕೊಂಡು ಹೋಗುವಂತಾಗಲಿ ಎಂದ ಅವರು ಪುರಾತನ ಕಾಲದಿಂದಲೂ ಹೆಣ್ಣಿಗೆ ಪ್ರಮುಖ ಸ್ಥಾನ ನೀಡುವ ಮೂಲಕ ಸಂತಾನ ವೃದ್ದಿಯಲ್ಲಿ ಇಂತಹ ಪ್ರಾಮುಖ್ಯತೆ ನೀಡಿದ್ದಾರೆಂದರು.
ಇದೇ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಕೊಳವಳ್ಳಿ ಹಾಲಪ್ಪಗೌಡ, ಕೋಮಿನಕೈಯ್ ಹಾಲಪ್ಪಗೌಡ, ಕೆ.ಆರ್.ಭೀಮರಾಜ್‌ಗೌಡ, ಸ್ವಾಮಿಗೌಡ, ಎಲ್.ವೈ.ನಾಗೇಂದ್ರಪ್ಪಗೌಡ, ಪಾರ್ವತಮ್ಮ ಕಮದೂರು, ಸುಂದರಮ್ಮ, ಎಲ್.ವೈ.ದಾನೇಶಪ್ಪ, ಕೊಲ್ಲಪ್ಪಗೌಡ ವಾಲೆಮನೆ, ದೂನ ದಾನೇಶಪ್ಪಗೌಡ, ತಿಲೋತ್ತಮೆ ದೊರೆರಾಜ್, ಕೆ.ಎಂ.ಬಸವರಾಜ್, ಚಂದ್ರಶೇಖರ, ರಾಜಶೇಖರ, ಲೋಹಿತ್‌ಗೌಡ, ರಮೇಶ್ ಆಚಾರ್ಯ, ಕೆ.ಬಿ.ಶಶಿಭೂಷಣ, ಶಶಿಧರ, ಇನ್ನಿತರ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಕ್ಕಳಲೇ, ಲಕ್ಕವಳ್ಳಿ, ಹಾರೋಹಿತ್ತಲು, ಕೊಳವಳ್ಳಿ, ಕೋಟೆಗದ್ದೆ, ಸಿದ್ದಾಪುರ, ವಾಲೆಮನೆ, ಆನೆಗದ್ದೆ, ಬಂಕವಳ್ಳಿ, ಶೆಟ್ಟಿಬೈಲು, ಮುನಿಯೂರು, ಕಾರ್ಕಳ, ಕೆಂಚಾಪುರ, ಆಲವಳ್ಳಿ, ಕಳಸೆ, ಬಸವಾಪುರ, ಕೆರಗೋಡು, ಗಿಳಾಲಗುಂಡಿ, ಬೆಳಕೋಡು, ಅಡಿಕಟ್ಟು, ದೂನ, ಹಾಲುಗುಡ್ಡೆ, ಹೊಸಗದ್ದೆ, ಮಳೂರು, ಜಂಬಳ್ಳಿ, ಹೊನ್ನೆಬೈಲು, ಬೆಂಗಳೂರು ಶಿವಮೊಗ್ಗ ಹೀಗೆ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲಾದ ಹಲವು ಸಂತಾನ ಬಳ್ಳಿ ಬೆಳೆದಂತೆ ಕರುಳಕುಡಿ ಬೆಳೆದು ತಮ್ಮ ನಾಗನ ಮೊಟ್ಟೆಯಂತೆ ಸಂತಾನ ವೃದ್ದಿಯಾಗುವಂತಾಗಲಿ ಶ್ರೀಗಳು ಹರಿಸಿದರು.
ಹೆಚ್.ವಿ. ಈಶ್ವರಪ್ಪಗೌಡ ಸ್ವಾಗತಿಸಿ, ನಿರೂಪಿಸಿದರು.