HOSANAGARA ; ಮಾನವೀಯ ಮಕ್ಕಳನ್ನು ರೂಪಿಸಲು ಮನೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂದು ತಾಳಗುಪ್ಪ ಕೂಡ್ಲಿಮಠದ ಶ್ರೀ ಮನ್ ನಿರಂಜನ ಪ್ರಣಾಪೀಠಾಧೀಶ್ವರ ಶ್ರೀ ಸಿದ್ದವೀರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕುವೆಂಪು ವಸತಿ ವಿದ್ಯಾಲಯದ ಪ್ರತಿಭಾ ಪುರಸ್ಕಾರ ಹಾಗೂ ಪ್ರದರ್ಶನ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಮಾನವೀಯತೆ ಹೊಂದಿದ ಮಕ್ಕಳನ್ನು ರೂಪಿಸಲು ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಪೋಷಕರು ಮನೆಗಳಲ್ಲಿ ನಿರ್ಮಿಸುವಂತೆ ಕರೆ ನೀಡಿದರು.
‘ಅಪ್ಪ’ ಎಂದರೆ ಜವಾಬ್ದಾರಿ ‘ಅಮ್ಮ’ ಎಂದರೆ ಸಂಸ್ಕಾರ ಇವೆರಡೂ ಒಗ್ಗೂಡಿದಾಗ ಮಾತ್ರ ಮಾನವ ಜನ್ಮ ನಿರ್ಮಾಣವಾಗಲಿದೆ ಸಂಸ್ಕಾರ ಜವಾಬ್ದಾರಿ ಇವೆರಡು ಇಲ್ಲದಿದ್ದರೆ ಮಾನವ ಪ್ರಾಣಿ ಸಮಾನ ಆದ್ದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಮಾತ್ರ ಕಳುಹಿಸಿದರೆ ತಮ್ಮ ಜವಾಬ್ದಾರಿ ಮುಗಿಯುತ್ತೆ ಎಂದು ಕೈಕಟ್ಟಿ ಕೂರದೆ ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕೆಂದರು.
ಭಾರತ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು ಕುವೆಂಪು ವಿದ್ಯಾ ಶಾಲೆಯ ವ್ಯವಸ್ಥಾಪಕರು ಆದ ಡಾ. ಸೊನಲೆ ಶ್ರೀನಿವಾಸ್, ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಕೃಷ್ಣಮೂರ್ತಿ, ಕುವೆಂಪು ವಿದ್ಯಾಸಂಸ್ಥೆಯ ಗೌರವ ನಿರ್ದೇಶಕರು ಹಿರಿಯ ಕಲಾವಿದರಾದ ಬೈಲಹೊಂಗಲದ ಶಿವಾನಂದ ಚಿತ್ರಗಾರ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಂ ಎನ್ ಸುಧಾಕರ್, ಸದಸ್ಯೆ ಕೃಷ್ಣವೇಣಿ, ನಗರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೈ. ಕೃಷ್ಣಮೂರ್ತಿ, ಕುವೆಂಪು ವಿದ್ಯಾ ಶಾಲೆಯ ಮುಖ್ಯೋಪಾಧ್ಯಾಯ ಎನ್ ನಾಗೇಂದ್ರ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳ ಉನ್ನತ ಶಿಕ್ಷಣದ ಆಯ್ಕೆ ಬಗ್ಗೆ ಪೋಷಕರು ಮಕ್ಕಳ ಬೇಡಿಕೆಗೆ ಪೂರಕವಾಗಿ ಸ್ಪಂದಿಸಬೇಕು. ಅವರಿಗೆ ಒತ್ತಡದ ಶಿಕ್ಷಣ ಹೇರಬಾರದು. ಮನೆಯಲ್ಲಿ ಮಕ್ಕಳಿಗೆ ಅಂದಂದಿನ ಪಾಠದ ಬಗ್ಗೆ ಸ್ಪಂದಿಸುತ್ತಿರಬೇಕು ಛಲದಿಂದ ವಿದ್ಯಾರ್ಜನೆ ಮಾಡುವ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕೆಂದರು.
ಜಯರಾಮ ಶೆಟ್ಟಿ, ಜಯಪ್ಪ ಬಹುಮಾನ ವಿತರಣೆ ಮಾಡಿ, ಮಕ್ಕಳನ್ನು ಮೊಬೈಲ್ ಹಾಗೂ ಟಿವಿ ಕಾರ್ಯಕ್ರಮಗಳಿಂದ ದೂರವಿಡುವಂತೆ ಪೋಷಕರಿಗೆ ಕರೆ ನೀಡಿದರು.
ನಯನ ಸ್ವಾಗತಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರ ಎನ್ ಅಭಾರ ಮನ್ನಿಸಿದರು. ಮಕ್ಕಳಿಂದ ಆಕರ್ಷಕ ನೃತ್ಯ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.