ರಿಪ್ಪನ್‌ಪೇಟೆ ; ಮಲೆನಾಡಿನ ವ್ಯಾಪ್ತಿಯಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಸಹ ಪಶು ಇಲಾಖೆಗೆ ಹೆಚ್ಚಿನ ಅನುದಾನ ನೀಡದಿರುವುದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ರೈತರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಸಮೀಪದ ಗವಟೂರು ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಹೊಸನಗರ ಪಶುಪಾಲನಾ ಇಲಾಖೆ ಮತ್ತು ರಿಪ್ಪನ್‌ಪೇಟೆ ಪಶು ಆಸ್ಪತ್ರೆ ಇವರ ಸಹಯೋಗದಲ್ಲಿ ಆಯೋಜಿಸಲಾದ ‘ಮಿಶ್ರತಳಿ ಮತ್ತು ಹಸುಗಳ ತಪಾಸಣೆ ಮತ್ತು ಪ್ರದರ್ಶನ ಶಿಬಿರ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸರ್ಕಾರ ರೈತರಿಗೆ ಹೈನುಗಾರಿಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಮೂಲಕ ಉತ್ತೇಜನ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಈ ಶಿಬಿರದ ಅಧ್ಯಕ್ಷತೆಯನ್ನು ಹೊಸನಗರ ತಾಲ್ಲೂಕ್ ಪಶು ಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ (ಅಡಳಿತ) ಡಾ.ನಟರಾಜ್ ವಹಿಸಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಭಾರತ ದೇಶ ಮೊದಲ ಸ್ಥಾನದಲ್ಲಿದೆ. ಜಾನುವಾರುಗಳಿಗೆ ದೊಡ್ಡ ರೋಗ ನಿರ್ಮೂಲನೆಯಾಗಿದ್ದು ಕಾಲುಬಾಯಿ ರೋಗ ಸೇರಿದಂತೆ ಇತರ ರೋಗಗಳು ಇದೆ. ಆದರೆ ಹೈನುಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗಗಳ ಬಗ್ಗೆ ರೈತರು ಜಾಗೃತೆ ವಹಿಸಿ ಆಗಾಗ ಇಲಾಖೆಯ ತಜ್ಞ ವೈದ್ಯಾಧಿಕಾರಿಗಳ ಸಲಹೆ ಪಡೆದು ಚಿಕಿತ್ಸೆಯನ್ನು ಕೊಡಿಸಿ ರೋಗ ನಿರ್ಮೂಲನೆಗೆ ಮುಂದಾಗುವಂತೆ ಕರೆ ನೀಡಿದರು.
ಪ್ರಕೃತಿ ನಾಶಮಾಡಿದರೆ ಪ್ರಕೃತಿಯೇ ನಮ್ಮನ್ನು ನಾಶಗೊಳಿಸುತ್ತದೆಂದು ಹೇಳಿದ ಅವರು, ಆದಷ್ಟು ನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ಜಾನುವಾರುಗಳ ರಕ್ಷಣೆ ಮಾಡಿದರೆ ನಮ್ಮ ರಕ್ಷಣೆ ಮಾಡಿಕೊಂಡಂತೆ ಎಂದರು.
ಜಾನುವಾರುಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಸರ್ಕಾರ 10 ಸಹಸ್ರ ರೂ. ಹಣ ನೀಡುವ ಯೋಜನೆ ಜಾರಿಯಲ್ಲಿದ್ದು ಈಗಾಗಲೇ ಕೆಲವರಿಗೆ ಈ ಸೌಲಭ್ಯ ದೊರೆತಿದೆ ಎಂದ ಅವರು, ಸೆಪ್ಟೆಂಬರ್ ತಿಂಗಳಿಂದ ಈ ಕಡೆಯಲ್ಲಿ ಸಾವು ಕಂಡ ಕುರಿಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.
ಈ ಶಿಬಿರದಲ್ಲಿ ಗ್ರಾಮದ ರೈತರಾದ ಯೋಗೇಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಗವಟೂರು, ವಾಸುದೇವ ಶೆಟ್ಟಿ, ಲೋಕಾಚಾರ್, ಲಕ್ಷ್ಮಮ್ಮ, ಚಿದಾನಂದ, ಚಂದ್ರಶೇಖರ, ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸುಮಾರು ನೂರಕ್ಕೂ ಅಧಿಕ ಜಾನುವಾರುಗಳ ಚಿಕಿತ್ಸೆಯನ್ನು ಪಶು ತಜ್ಷ ವೈದ್ಯಾರಾದ ಡಾ.ಕೆ.ಎಂ.ನಾಗರಾಜ್, ಡಾ. ರವಿಕುಮಾರ್, ಡಾ.ದಯಾನಂದ, ಡಾ.ಸಂತೋಷ, ಡಾ.ಧನಂಜಯ,ಡಾ. ಅರ್ಚನಾ, ಇಲಾಖೆಯ ಸಿಬ್ಬಂದಿಗಳಾದ ಪಶುಪರಿವೀಕ್ಷಕ ರಂಗಪ್ಪ, ಮಣಿರಾಜ್, ಸಂತೋಷ, ಧನಂಜಯ, ನಾಗೇಂದ್ರ ಇನ್ನಿತರ ಸಿಬ್ಭಂದಿವರ್ಗ ಹಾಜರಿದ್ದರು.
ಶಾಲಾ ವಿದ್ಯಾರ್ಥಿನಿ ಕು. ರಿತಿಕಾ ಮತ್ತು ಮಾನ್ಯ ಪ್ರಾರ್ಥಿಸಿದರು. ಡಾ.ನಟರಾಜ್ ಸ್ವಾಗತಿಸಿದರು. ಡಾ.ಸಂತೋಷ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಯುವಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆ

ರಿಪ್ಪನ್‌ಪೇಟೆ ; ಹೊಸನಗರ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆಯಾಗಿದ್ದಾರೆ.