ರಿಪ್ಪನ್‌ಪೇಟೆ : ಇಲ್ಲಿನ ಜಿ.ಎಸ್.ಬಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ವ್ಯವಸ್ಥಾನಾ ಸಮಿತಿ ಮಾಜಿ ನಿರ್ದೇಶಕ ಮತ್ತು ವ್ಯಾಪಾರೋದ್ಯಮಿ ಲಕ್ಷ್ಮಿನಾರಾಯಣ ಪೈ ಇಂದು ಮಧ್ಯಾಹ್ನ 2.35ಕ್ಕೆ ಕುಂದಾಪುರದ ಕೋಟೇಶ್ವರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅಂತಿಮ ಸಂಸ್ಕಾರವು ಬುಧವಾರ ಬೆಳಿಗ್ಗೆ 08 ಗಂಟೆಗೆ ಕೋಟೇಶ್ವರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ಸರಳ ವ್ಯಕ್ತಿತ್ವದ ಲಕ್ಷ್ಮಿನಾರಾಯಣ (ದೇವಣ್ಣ ಮಾಮ್) ಇವರ ನಿಧನದಿಂದ ಜಿ.ಎಸ್.ಬಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ನಿಧನಕ್ಕೆ ಜಿ.ಎಸ್.ಬಿ ಸಮಾಜದ ಅಧ್ಯಕ್ಷ ಗಣೇಶ ಎನ್ ಕಾಮತ್, ಎಲ್.ವೈ ದಾನೇಶಪ್ಪ, ಎಂ.ಬಿ. ಲಕ್ಷ್ಮಣಗೌಡ, ಹರೀಶ್ ಶಂಕರ್ ಶರಾಪ್, ಹರೀಶ್ ಪ್ರಭು, ನಾಗೇಶ್ ನಾಯಕ್, ದೀಪಕ್ ಭಗತ್, ರಮೇಶ್, ವಿಘ್ನೇಶ್ ಸಂತಾಪ ವ್ಯಕ್ತಪಡಿಸಿ ಮೃತರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕುರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

