ರಿಪ್ಪನ್ಪೇಟೆ ; ಮಲೆನಾಡು ಶಿವಮೊಗ್ಗದಲ್ಲಿ ವನ್ಞಮೃಗಗಳ ಹಾವಳಿ ಮುಂದುವರಿದಿದ್ದು, ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಿತ್ತಲು, ಕೊಳವಂಕ ಮತ್ತು ಕುಂಭತ್ಮನೆ ಬಳಿ ಚಿರತೆ ಓಡಾಟ ಕಂಡುಬಂದಿದ್ದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1KSD3sGiiH/
ಭಾನುವಾರ ಬೆಳಗಿನಜಾವ ಸುಮಾರು 3.45ರ ಸಮಯದಲ್ಲಿ ಹಾರೋಹಿತ್ತಲು ಗ್ರಾಮದ ಕಂಭತ್ಮನೆ ವಾಸುದೇವ ಎಂಬುವರ ಮನೆಯ ಬಳಿಯಲ್ಲಿನ ಅಂಗಳದಲ್ಲಿ ಓಡಾಡಿ ನಾಯಿಯ ಮೇಲೆ ದಾಳಿ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅದೃಷ್ಟವಶಾತ್ ನಾಯಿ ತಪ್ಪಿಸಿಕೊಂಡಿದೆ ಎಂದು ಹೇಳಲಾಗಿದೆ.
ಬೆಳಗ್ಗೆ ನಾಯಿಯ ಸ್ಥಿತಿಯನ್ನು ಗಮನಿಸಿ ಅನುಮಾನಗೊಂಡ ಮನೆಯ ಮಾಲೀಕರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಚಿರತೆ ಓಡಾಟ ನಡೆಸಿರುವ ದೃಶ್ಯ ಕಂಡು ತಕ್ಷಣ ಅರಣ್ಯ ಇಲಾಖೆಯವರಿಗೆ ತಿಳಿಸಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಮಲೆನಾಡಿನ ವ್ಯಾಪ್ತಿಯಲ್ಲಿ ಕಾಡಾನೆ, ಕಾಡುಕೋಣ ಈಗ ಚಿರತೆಯ ದಾಳಿಯಿಂದಾಗಿ ಜನ ಭಯದಿಂದ ಜೀವನ ಸಾಗಿಸುವಂತಾಗಿದ್ದು ಜೀವಹಾನಿಯಾಗುವ ಮುನ್ನ ಚರಿತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





