ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗೆ ಪರವಾನಿಗೆ !ತಿಂಗಳಿಗೆ 810 ರೂ ಗೆ ಸಿಗಲಿದೆ ಇಂಟರ್ನೆಟ್ !

Written by Koushik G K

Published on:

Starlink satellite internet service :ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಆರಂಭಿಸಲು ಈಗಾಗಲೇ ಸಾಕಷ್ಟು ಸುಲಭವಾಗಿದೆ. ಏಲೋನ್ ಮಸ್ಕ್ ಅವರ ಕಂಪನಿಯು ಸರ್ಕಾರದಿಂದ ಅಗತ್ಯವಿರುವ GMPCS ಪರವಾನಗಿಯನ್ನು ಪಡೆದಿದೆ.

WhatsApp Group Join Now
Telegram Group Join Now
Instagram Group Join Now

ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ನ್ನು ಬೆಂಬಲಿಸುತ್ತಿರುವ ಒನ್‌ವೆಬ್ ಈಗಾಗಲೇ ಈ ಪರವಾನಗಿಯನ್ನು ಪಡೆದುಕೊಂಡಿದೆ. ಈಗ ಸ್ಪೆಕ್ಟ್ರಮ್ ಹಂಚಿಕೆಯ ನಂತರ, ದೇಶದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ.

ನೀವು ನಿಮ್ಮ ಮನೆಯಲ್ಲಿ ಉಪಗ್ರಹ ಇಂಟರ್ನೆಟ್ ಹಾಕಿಸಲು ಯೋಚಿಸುತ್ತಿದ್ದರೆ, ಸ್ಟಾರ್‌ಲಿಂಕ್ ಕಿಟ್‌ನಲ್ಲಿ ಯಾವ ಯಾವ ಉಪಕರಣಗಳು ಇರುವುದೆಂದು ತಿಳಿದುಕೊಳ್ಳುವುದು ಮುಖ್ಯ. ಕಂಪನಿಯು ತಿಂಗಳಿಗೆ 810 ರೂ.ದ ಯೋಜನೆಯನ್ನು ನೀಡಲಿದೆ ಎಂದು ತಿಳಿಸಿದೆ, ಆದರೆ ಕಿಟ್‌ಗಾಗಿ ನೀವು ಎಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಎಂಬುದು ತಿಳಿದುಕೊಳ್ಳಿ .

ಸ್ಟಾರ್‌ಲಿಂಕ್ ಕಿಟ್‌ನ ಬೆಲೆಯ ಬಗ್ಗೆ ನಾವು ವಿವಿಧ ವೆಬ್‌ಸೈಟ್‌ಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ಅಮೆರಿಕದಲ್ಲಿ ಮತ್ತು ಕೀನ್ಯಾದಲ್ಲಿ ಲಭ್ಯವಿರುವ ಕಿಟ್‌ಗಳ ಬೆಲೆಯ ಕುರಿತಾದ ಮಾಹಿತಿಯನ್ನು ಹೆಚ್ಚಾಗಿ ಗಮನದಲ್ಲಿಟ್ಟಿದ್ದೇವೆ. ಭಾರತೀಯ ರೂಪಾಯಿಯಲ್ಲಿ, ಈ ಬೆಲೆ ಸುಮಾರು 30,000 ರಿಂದ 36,000 ರೂಪಾಯಿಗಳ ನಡುವಾಗಿರುವುದು ಕಂಡುಬರುತ್ತದೆ. ಇದರಿಂದ, ಸ್ಟಾರ್‌ಲಿಂಕ್ ಸಂಪರ್ಕವನ್ನು ಪಡೆಯಲು ನೀವು ಸುಮಾರು 30,000 ರೂಪಾಯಿ ಬೇಕು .

Read More

UPI payment : 4 ಗಂಟೆಗಳ ಕಾಲ UPI ಸ್ಥಗಿತ !

1 ಲಕ್ಷ ರೂ.ಗಿಂತ ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಟಾಪ್ 4 ಎಲೆಕ್ಟ್ರಿಕ್ ಬೈಕ್‌ಗಳು !

Leave a Comment