HOSANAGARA ; ಇತಿಹಾಸ ಪ್ರಸಿದ್ಧ ತಾಲೂಕಿನ ಕಾರಣಗಿರಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ದಂಪತಿಗಳು ಶುಕ್ರವಾರ ಭೇಟಿ ನೀಡಿ ಶ್ರೀ ಸ್ವಾಮಿಗೆ ವಿಶೇಷ ಸೇವೆ ನೆರವೇರಿಸಿದರು.
ಬಳಿಕ ದೇವಸ್ಥಾನ ಆಡಳಿತ ಮಂಡಳಿ ಪರವಾಗಿ ಅರ್ಚಕ ಹನಿಯ ರವಿ ನ್ಯಾಯಮೂರ್ತಿಗಳಿಗೆ ಶಾಲು ಹೊದಿಸಿ, ನೆನಪಿಕ ಕಾಣಿಕೆ, ಪ್ರಸಾದ ನೀಡಿ ವಿಶೇಷ ಗೌರವ ಸಮರ್ಪಣೆ ನೀಡಿದರು.