ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಸುಸಂಸ್ಕೃತರನ್ನಾಗಿ ಮಾಡಿ ; ಶ್ರೀಗಳು

Written by malnadtimes.com

Published on:

ರಿಪ್ಪನ್‌ಪೇಟೆ ; ಇತ್ತೀಚಿನ ದಿನಮಾನಗಳಲ್ಲಿ ತಂದೆ-ತಾಯಿಯರನ್ನು ವೃದ್ದಾಶ್ರಮಗಳಲ್ಲಿ ಬಿಟ್ಟು ವಿದೇಶದಲ್ಲಿ ವಾಸ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳಿಗೆ ವಿದ್ಯೆ ನೀಡಿದರೆ ಸಾಲದು ಗುರು-ಹಿರಿಯರನ್ನು ಗೌರವಾದರಗಳಿಂದ ಕಾಣುವಂತೆ ಅವರಿಗೆ ಪ್ರಾಥಮಿಕ ಹಂತದಲ್ಲಿಯೇ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿ ಮಾಡುವುದು ನಮ್ಮಗಳ ಆದ್ಯ ಕರ್ತವ್ಯವಾಗಿದೆ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಇಂದು ಏರ್ಪಡಿಸಲಾಗಿದ್ದ ಮಕರ ಸಂಕ್ರಾಂತಿ ಧರ್ಮಸಭೆ ದಿವ್ಯಸಾನಿದ್ಯ ವಹಿಸಿ ಧರ್ಮ ಸಭೆಯ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿ, 12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಜಾತಿ ಬೇಧ ಭಾವನೆಯನ್ನು ದೂರ ಮಾಡುವ ಮೂಲಕ ಸರ್ವಜನಾಂಗದವರಲ್ಲಿ ಸಾಮರಸ್ಯ ಭಾವನೆ ಐಕತ್ಯೆಯ ಪರಿಕಲ್ಪನೆಯನ್ನು ಬೆಳೆಸಿದರು. ಕಾಯಕ ನಿಷ್ಟೆ ಪ್ರಾಮಾಣಿಕತೆಯೊಂದಿಗೆ ಶ್ರಮದ ದುಡಿಮೆಯ ಮೂಲಕ ದುಡಿಮೆ ಅಲ್ಪ ಹಣವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವ ಪರಿಕಲ್ಪನೆಯನ್ನು ಮೂಡಿಸಿದರು. ಅಲ್ಲದೆ ಹಾನಗಲ್ ಕುಮಾರ ಶಿವಯೋಗಿಗಳು ವೀರಶೈವ ಲಿಂಗಾಯತ ಸಮಾಜವನ್ನು ಸ್ಥಾಪಸಿ ಸಮಾಜದಲ್ಲಿ ಕಡುಬಡವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮೇಲ್ಪಕ್ತಿ ಹಾಕಿದವರಾಗಿದ್ದಾರೆಂದರು.

ಮೂಲೆಗದ್ದೆ ಸದಾನಂದಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಗೋಪಾಲಕೃಷ್ಣ ಬೇಳೂರು ಭಾಗವಹಿಸಿ ಮಾತನಾಡಿ, ಮೂಲೆಗದ್ದೆ ಮಠದ ಸರ್ವಾಂಗೀಣ ಪ್ರಗತಿಗೆ ಸಹಕರಿಸುವ ಭರವಸೆ ನೀಡಿ, ಈಗಾಗಲೇ ಶರಾವತಿ ನೀರನ್ನು ರಾಜಧಾನಿಗೆ ತೆಗೆದುಕೊಂಡು ಹೋಗುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿತು. ಆದರೆ ಮೂಲೆಗದ್ದೆ ಶ್ರೀಗಳ ಮತ್ತು ಜಿಲ್ಲಾ ಮಠಾಧೀಶ ಪರಿಷತ್‌ನವರ ಹೋರಾಟದ ಕಾರಣ ಆ ನಿರ್ಧಾರವನ್ನು ಸರ್ಕಾರ ವಾಪಾಸ್ ತೆಗೆದುಕೊಂಡಿದೆ ಎಂದು ಹೇಳಿ, ಸಭೆಯಲ್ಲಿ ಚಪ್ಪಾಳೆಯ ಕರತಾಡನ ಮೊಗಳಗಿತು.

ಮಾಜಿ ಎಂ.ಎಲ್.ಸಿ.ರುದ್ರೇಗೌಡ, ಉಡುಪಿ ಸಂದ್ಯಾಶಣೈ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ, ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ, ನರಗುಂದ ವಿರಕ್ತಮಠದ ಶಿವಕುಮಾರಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ತೊಗರ್ಸಿ ಮಹಾಂತ ದೇಶಿಕೇಂದ್ರಶಿವಾಚಾರ್ಯ ಮಹಾಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯಾ ಶಿವಾಚಾರ್ಯ ಮಹಾಸ್ವಾಮೀಜಿ, ಹಾರ‍ನಹಳ್ಳಿ ಚೌಕಿಮಠ ನೀಲಕಂಠ ಮಹಾಸ್ವಾಮೀಜಿ, ಅರಳಿಕಟ್ಟೆ ವಿರಕ್ತಮಠದ ಶಿವಕುಮಾರಸ್ವಾಮೀಜಿ, ಗುತ್ತಲಕಲ್ಮಠದ ಪ್ರಭುಮಹಾಸ್ವಾಮೀಜಿ, ಇನ್ನಿತರರು ಉಪಸ್ಥಿತರಿದ್ದರು.

ಶಿರಾಳಕೊಪ್ಪ ಮಲ್ಲಿಕಾರ್ಜುನ ಸ್ವಾಮಿ ಪ್ರಾರ್ಥಿಸಿದರು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಭಿನವ ಚನ್ನಬಸವ ಮಹಾಸ್ವಾಮೀಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಟ್ಟೆಮಲ್ಲಪ್ಪ ಗುರುಕುಲ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಜನಾಕರ್ಷಣೆಗೊಂಡಿತು.

Leave a Comment