HOSANAGARA | ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲ್ಲೂಕಿನಾದ್ಯಂತ ಇಂದಿನಿಂದ ಪ್ರಾರಂಭವಾದ ಪುಷ್ಯ ಮಳೆ ಅಬ್ಬರ ಜೋರಾಗಿದೆ.
HOSANAGARA :ಶನಿವಾರವೂ ಹೊಸನಗರ ತಾಲೂಕಿನಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಮಾಸ್ತಿಕಟ್ಟೆ : 167 mm
ಹುಲಿಕಲ್ : 149 mm
ಸಾವೇಹಕ್ಲು : 140 mm
ಚಕ್ರಾನಗರ : 125 mm
ಕಾರ್ಗಲ್ (ಸಾಗರ) 116 mm
ಬಿದನೂರುನಗರ : 109 mm
ಮಾಣಿ : 108 mm
ಯಡೂರು : 105 mm
ಹುಂಚ : 68.4 mm
ಹೊಸನಗರ : 52 mm
ರಿಪ್ಪನ್‌ಪೇಟೆ 36.8 mm
ಅರಸಾಳು : 36.8 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8:00 ಗಂಟೆಗೆ 1794.30 ಅಡಿ ತಲುಪಿದ್ದು ಜಲಾಶಯಕ್ಕೆ 69724 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟ ಇದೇ ಅವಧಿಗೆ 1761.40 ಅಡಿ ದಾಖಲಾಗಿತ್ತು. ಕಳೆದ ವರ್ಷಕ್ಕಿಂತ 33 ಅಡಿಗಳಷ್ಟು ಹೆಚ್ಚಿನ ನೀರು ಸಂಗ್ರಹವಾಗಿದೆ.