ತೀರ್ಥಹಳ್ಳಿ ; ಮಲ್ನಾಡೋತ್ಸವ – 2025 ಕಾರ್ಯಕ್ರಮಕ್ಕೆ ಇಂದು ಅದ್ದೂರಿಯಾಗಿ ಚಾಲನೆ ಸಿಕ್ಕಿದೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಹಾಗೂ ಪಟ್ಟಣ ಪಂಚಾಯಿತಿ ಆವರಣದಲ್ಲಿ ಸುಮಾರು 70 ಹೆಚ್ಚು ವಿವಿಧ ಮಳಿಗೆಗಳು ಇಡೀ ತಾಲೂಕಿನ ಆಸಕ್ತಿಯನ್ನು ಮೂಡಿಸಿದೆ.

ಕಾರ್ಯಕ್ರಮದಲ್ಲಿ ಕೃಷಿ ಮೇಳ, ಆರೋಗ್ಯ ಮೇಳ, ಆಹಾರ ಮೇಳ, ಶೈಕ್ಷಣಿಕ ಮೇಳ ಹಾಗೂ ಕಲಾ ಮೇಳಗಳು ಉದ್ಘಾಟನೆಗೊಂಡಿದ್ದು, ನೂರಾರು ಗಣ್ಯರು ಈಗಾಗಲೇ ಆಗಮಿಸಿ ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿ ತಮ್ಮ ಪ್ರದರ್ಶನ ನೀಡುತ್ತಿದ್ದಾರೆ.

ಇನ್ನು ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 60ಕ್ಕೂ ಹೆಚ್ಚು ಕೃಷಿ, ಆಹಾರ, ಫ್ಯಾಷನ್ ಹಾಗೂ ಆಟೋ, ರಿಯಲ್ ಎಸ್ಟೇಟ್ ಮುಂತಾದ ಮಳಿಗೆಗಳು ಆಗಮಿಸಿದ್ದು ಈಗಾಗಲೇ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ತಾಲ್ಲೂಕಿನ ಹಾಗೂ ಮಲೆನಾಡಿನ ಮೂಲೆ-ಮೂಲೆಗಳಿಂದ ಜನ ಆಗಮಿಸುತ್ತಿದ್ದು, ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ.

ಮೇ 10ಕ್ಕೆ ಉದ್ಯೋಗ ಮೇಳ ಇದ್ದು ಬೆಳಿಗ್ಗೆಯಿಂದ ಶುರುವಾಗಲಿದೆ. ಸಂಜೆ ಡ್ಯಾನ್ಸ್ ಎಕ್ಸ್‌ಪ್ರೆಸ್ ವಿಶೇಷ ಕಾರ್ಯಕ್ರಮ ಇದೆ. ಮೇ 12ರಂದು ಕೃಷಿ ಸಂವಾದ ಕಾರ್ಯಕ್ರಮ ಇರಲಿದೆ.