ಹೊಸನಗರ

ಮಾಮ್‌ಕೋಸ್‌ನಿಂದ 6 ಲಕ್ಷ ರೂ. ಚೆಕ್ ವಿತರಣೆ | ಅಡಿಕೆ ಬೆಳೆಗಾರರ, ಕೂಲಿ ಕಾರ್ಮಿಕರ ಏಳಿಗೆಗಾಗಿ ಸಂಸ್ಥೆ ದುಡಿಯುತ್ತಿದೆ ; ಹೆಚ್.ಎಸ್. ಮಹೇಶ್ ಹುಲ್ಕುಳಿ

ಹೊಸನಗರ ; ನಮ್ಮ ಮಲೆನಾಡು ಮಾರಾಟದ ಸಂಸ್ಥೆ ಸುಮಾರು 85 ವರ್ಷಗಳಿಂದ ಅಡಿಕೆ ಬೆಳೆಗಾರರ ಹಾಗೂ ಕೂಲಿ ಕಾರ್ಮಿಕರ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿದ್ದು ಯಾವುದೇ ಅಡಿಕೆ ಬೆಳೆಗಾರರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾದರೂ ನಮ್ಮ ಸಂಸ್ಥೆ ಅವರಿಗೆ ಬೆನ್ನೆಲುಬಾಗಿ ಸಹಾಯ ಹಸ್ತ ಚಾಚುತ್ತದೆ ಎಂದು ಹೊಸನಗರದ ಅಡಿಕೆ ಮಾರಾಟಗಾರ ಸಹಕಾರ ಸಂಘದ ಉಪಾಧ್ಯಕ್ಷ ಹೆಚ್.ಎಸ್. ಮಹೇಶ್ ಹುಲ್ಕುಳಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಕೂಲಿ ಕಾರ್ಮಿಕನ ಪತ್ನಿ ಇಂದಿರಾರಿಗೆ 6 ಲಕ್ಷ ರೂಪಾಯಿ ಚೆಕ್ ವಿತರಿಸಿ ಮಾತನಾಡಿದರು.

ಕೂಲಿ ಕಾರ್ಮಿಕರಾದ ಪುಟ್ಟಸ್ವಾಮಿಯವರು ಅಡಿಕೆ ಗೊನೆ ಕುಯ್ಯಲು ಹೋದಾಗ ಅಲ್ಯೂಮಿನಿಯಮ್ ದೋಟಿಯು ವಿದ್ಯುತ್ ತಂತಿಗೆ ತಗುಲಿ ಮೃತ ಪಟ್ಟಿದ್ದು ಮಲೆನಾಡು ಅಡಿಕೆ ಬೆಳೆಗಾರರ ಸಂಘದ ಗುಂಪಿನಿಂದ 6 ಲಕ್ಷ ರೂಪಾಯಿ ಮಂಜೂರಾತಿ ಪಡೆದಿದ್ದು ಕೂಲಿ ಇಂದಿರರವರಿಗೆ ಚೆಕ್ ವಿತರಿಸಿದರು.

ಮೃತಪಟ್ಟ ಪುಟ್ಟಸ್ವಾಮಿ, ಕುಸಮಾ ಬಿ ಉಡುಪ ಬಿನ್ ವಿಘ್ನೇಶ್ವರ ಉಡುಪ ಮಂಡ್ರೊಳ್ಳಿ ನಾಗರಕೊಡಿಗೆ ಇವರ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ವರ್ಷ ಸಾಕಷ್ಟು ಜನ ಕೂಲಿ ಕಾರ್ಮಿಕರಿಗೆ ಪರಿಹಾರದ ರೂಪದಲ್ಲಿ ಗುಂಪು ವಿಮೆ ಹಣವನ್ನು ನಮ್ಮ ಸಂಸ್ಥೆಯಿಂದ ವಿತರಿಸಲಾಗಿದೆ. ಪ್ರತಿಯೊಬ್ಬ ಅಡಿಕೆ ಬೆಳೆಗಾರರು ಗುಂಪು ವಿಮೆ ಮಾಡಿಸಿಕೊಳ್ಳಿ ನಿಮಗೂ ಹಾಗೂ ನಿಮ್ಮ ಜೊತೆ ಕೆಲಸ ಮಾಡುವ ಕೂಲಿ ಕಾರ್ಮಿಕರ ಕುಟುಂಬಕ್ಕೂ ಸಹಾಯವಾಗುತ್ತದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ನಿರಂತರ ಅಡಿಕೆ ಹಾಕುವವರಿಗೂ ಸಂಸ್ಥೆಯಿಂದ ಮರಣೋತ್ತರ ಚೆಕ್ ವಿತರಣೆ :

ಕೆ.ವಿ.ಕೃಷ್ಣಮೂರ್ತಿ ಕೀಳಂಬಿಯವರು ಇವರು ಮೃತರಾಗಿದ್ದು ಇವರು ಸಂಘದಲ್ಲಿ ಮರಣೋತ್ತರ ನಿಧಿ ಯೋಜನೆಯಲ್ಲಿ 10 ಸಾವಿರ ರೂ. ತೊಡಗಿಸಿದ್ದು ಅವರ ಪುತ್ರ ರಾಘವ ಎಂಬುವರಿಗೆ ಹತ್ತು ಪಟ್ಟು ಹೆಚ್ಚು ಹಣವಾದ ಒಂದು ಲಕ್ಷ ಹಣದ ಚೆಕ್ ವಿತರಿಸಿ ನಿರಂತರವಾಗಿ ನಮ್ಮ ಸಂಸ್ಥೆಯವರಿಗೆ ಪ್ರತಿವರ್ಷ 3 ಕ್ವಿಂಟಲ್ ಅಡಿಕೆ ಹಾಕುವವರಿಗೆ ಅಡಿಕೆ ಹಾಕಿದವರ ಕುಟುಂಬಕ್ಕೆ ಮರಣೋತ್ತರ ನಿಧಿ ಯೋಜನೆಯಲ್ಲಿ ಮೃತರಾದ ಕುಟುಂಬಕ್ಕೆ ಒಂದು ಲಕ್ಷದ ಚೆಕ್ ನೀಡುವ ವ್ಯವಸ್ಥೆಯನ್ನು ಸಂಸ್ಥೆಯು ಹೊಂದಿದೆ. ಇದರ ಜೊತೆಗೆ ನಿರಂತರ ಅಡಿಕೆ ಹಾಕದೇ ಇರುವವರು 10 ಸಾವಿರ ರೂಪಾಯಿ ಮರಣೋತ್ತರ ನಿಧಿಗೆ ಸಂದಾಯ ಮಾಡಿದವರು ಮೃತರಾದ ನಂತರ 50ಸಾವಿರ ಸಂಸ್ಥೆ ನೀಡಲಿದ್ದು ಆಕಸ್ಮತಾಗಿ ಹಣ ಇಟ್ಟವರು ಹಣ ಬೇಕು ಎಂದು ಸಂಸ್ಥೆಯವರಿಗೆ ಕೇಳಿದರೆ ಬ್ಯಾಂಕ್ ಬಡ್ಡಿಯ ಸಹಿತ ಹಣವನ್ನು ಹಿಂದಿರುಗಿಸುವ ವ್ಯವಸ್ಥೆ ನಮ್ಮ ಸಂಸ್ಥೆ ಹೊಂದಿದೆ. ಈ ಯೋಜನೆಯಿಂದ ಕುಟುಂಬದ ಯಜಮಾನ 1 ಲಕ್ಷದಿಂದ 150 ಲಕ್ಷದವರೆಗೆ ಸಾಲ ಮಾಡಿದ್ದಲ್ಲಿ ಸಾಲ ತೀರಿಸಲು ಅನುಕೂಲವಾಗಲಿದೆ ಎಂದು ಪ್ರತಿಯೊಬ್ಬರ ಅಡಿಕೆ ಬೆಳೆಗಾರರು ನಮ್ಮ ಸಂಸ್ಥೆಗೆ ಅಡಿಕೆ ಹಾಕುವುದರ ಜೊತೆಗೆ ನಮ್ಮ ಸಂಸ್ಥೆ ನೀಡುವ ಲಾಭವನ್ನು ಉಪಯೋಗಿಸಿಕೊಳ್ಳಬೇಕೆಂದು ಈ ಕೇಳಿಕೊಂಡರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ವಿ. ಕೃಷ್ಣಮೂರ್ತಿ, ಹೆಚ್. ಧರ್ಮೇಂದ್ರ, ರತ್ನಾಕರ್, ವ್ಯವಸ್ಥಾಪಕರಾದ ಗಣಪತಿ, ಸಿಬ್ಬಂದಿಗಳಾದ ವಿದ್ಯಾ, ಲೀಲಾವತಿ, ದಿವ್ಯ, ಮಧುಸೂದನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!