ಪ್ರಕರಣ ನಡೆದು ಕೆಲವೇ ಗಂಟೆಗಳಲ್ಲಿ ಎಟಿಎಂನಲ್ಲಿ ಕಳ್ಳತನ ನಡೆಸಲು ಯತ್ನಿಸಿದವನ ಬಂಧನ !

Written by malnadtimes.com

Published on:

ಶಿವಮೊಗ್ಗ ; ಕಳ್ಳನೋರ್ವ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸಿದ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಸಮೀಪದಲ್ಲಿರುವ ಬ್ಯಾಂಕ್ ಒಂದರ ಎಟಿಎಂನಲ್ಲಿ ಕಳವು ಯತ್ನ ನಡೆದಿದೆ.

ಎಟಿಎಂ ಬಾಕ್ಸ್ ಒಡೆಯಲು ಕಳ್ಳ ಯತ್ನಿಸಿದ್ದಾನೆ. ಎಟಿಎಂನಲ್ಲಿ ಸೈರನ್ ಶಬ್ದ ಹಾಗೂ 112 ಸಿಬ್ಬಂದಿಯನ್ನು ನೋಡಿ ಕಳ್ಳ ಪರಾರಿಯಾಗಿದ್ದಾನೆ.

ಈ ಸಂಬಂಧ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಕಲಂ 331(4) ಮತ್ತು 62 BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿ ಬಿಹಾರ ರಾಜ್ಯದ ಸಾರಸ್ ಜಿಲ್ಲೆಯ ಸಮಾನಿ ತಾಲೂಕಿನ ಜಲೈ ಗ್ರಾಮದ ಕಾಂಕ್ರೀಟ್ ಕೆಲಸಗಾರ ಮಹಮ್ಮದ್ ವಸೀಂ ಬಿನ್ ಅಲೀ ಹಸನ್ (22) ಈತನನ್ನು ಬಂಧಿಸಲಾಗಿದೆ.

ಈ ಕಾರ್ಯಾಚರಣೆಗೆ ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ್ ಭಾಗೋಜಿ, ಎಎಸ್ಐ ಹರ್ಷ ಎಎಸ್ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ಕಿಶೋರ್, ಆಂಜಿನಪ್ಪ, ಕಾಂತರಾಜ್ ಮತ್ತು ಪ್ರಕಾಶ್ ಹಾಗೂ ಇಲಾಖಾ ವಾಹನದ ಚಾಲಕ ಸೋಮು ಎಪಿಸಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್ಪಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.

Leave a Comment