RIPPONPETE ; ಡೈರಿಗೆ ಹಾಲು ಹಾಕಿ ಮನೆಗೆ ವಾಪಾಸ್ ಆಗುವಾಗ ಬೈಕ್ ಸಮೇತ ಹಳ್ಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಿತ್ತಲು ಸಮೀಪ ನಡೆದಿದೆ.
ಕಡೆಗದ್ದೆ ಸಮೀಪದ ಗೇರುಗಲ್ಲು ದೇವೇಂದ್ರಪ್ಪ (55) ಮೃತ ದುರ್ದೈವಿ. ಸಂಜೆ 7:30 ರ ಸುಮಾರಿಗೆ ಡೈರಿಗೆ ಹಾಲು ಹಾಕಿ ಮನೆಗೆ ತೆರಳುವಾಗ ಈ ಹಿಂದೆ ಬಂದ ಮಳೆಯಿಂದ ಕೊರೆದು ಹೋದ ರಸ್ತೆ ಪಕ್ಕದಲ್ಲಿರುವ ಸುಮಾರು 20-25 ಅಡಿ ಆಳದ ಹೊಂಡಕ್ಕೆ ಬೈಕ್ ಸಮೇತ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೈಕ್ ಹಾಗೂ ಮೃತದೇಹ ಹಳ್ಳದಲ್ಲಿಯೇ ಇದ್ದು ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.