ಹೊಸನಗರ

ಹೊಸನಗರ ; ಮಾಣಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 307 ಮಿ.ಮೀ. ಮಳೆ ದಾಖಲು !

ಹೊಸನಗರ ; ರಾಜ್ಯದ ಪ್ರಮುಖ ಜಲಾಶಯವಾದ ಲಿಂಗನಮಕ್ಕಿಗೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು ಮಾಣಿ ಅಣೆಕಟ್ಟು ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ 307 ಮಿ.ಮೀ. ಮಳೆ ದಾಖಲಾಗಿದೆ.

WhatsApp Group Join Now
Telegram Group Join Now
Instagram Group Join Now

ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ?

  • ಹುಲಿಕಲ್ : 279 ಮಿ.ಮೀ.
  • ಸಾವೆಹಕ್ಲು : 262 ಮಿ.ಮೀ.
  • ಮಾಸ್ತಿಕಟ್ಟೆ : 255 ಮಿ.ಮೀ.
  • ಯಡೂರು : 232 ಮಿ.ಮೀ.
  • ಸುಳಗೋಡು : 214 ಮಿ.ಮೀ.
  • ಕಾರ್ಗಲ್ (ಸಾಗರ) : 138 ಮಿ.ಮೀ.
  • ಹೊಸನಗರ : 119 ಮಿ.ಮೀ.
  • ಮೇಲಿನಬೆಸಿಗೆ : 118 ಮಿ.ಮೀ.
  • ಮಾರುತಿಪುರ : 102 ಮಿ.ಮೀ.
  • ಮುಂಬಾರು : 97 ಮಿ.ಮೀ.
  • ಕೋಡೂರು : 97 ಮಿ.ಮೀ.
  • ಹೊಸೂರು (ಸಂಪೆಕಟ್ಟೆ) : 83 ಮಿ.ಮೀ.
  • ಬಾಳೂರು : 81.5 ಮಿ.ಮೀ.
  • ಹುಂಚ : 58.4 ಮಿ.ಮೀ.

1766.40 ಅಡಿ ತಲುಪಿದ ಲಿಂಗನಮಕ್ಕಿ ಜಲಾಶಯ :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1766.40 ಅಡಿ ತಲುಪಿದ್ದು ಕಳೆದ ವರ್ಷ ಇದೇ ಅವಧಿಗೆ 1745.25 ಅಡಿ ದಾಖಲಾಗಿದ್ದು ಜಲಾಶಯಕ್ಕೆ 39961 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಶಾಲೆಗಳಿಗೆ ರಜೆ :

ಹೊಸನಗರ ತಾಲೂಕಿನಾದ್ಯಂತ ಮಳೆಯ ಆರ್ಭಟ ನಿರಂತರವಾಗಿದ್ದು ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಸೋಮವಾರ ಶಾಲಾ, ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]