ಮನಮೋಹನ್ ಸಿಂಗ್ ನಿಧನ ; ಹೊಸನಗರ ಕಾಂಗ್ರೆಸ್ ಕಛೇರಿಯಲ್ಲಿ ಸಂತಾಪ ಸಭೆ

Written by malnadtimes.com

Published on:

HOSANAGARA ; ಕಾಂಗ್ರೆಸ್ ಕಛೇರಿಯಾದ ಗಾಂಧಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ನೇತೃತ್ವದಲ್ಲಿ ಗುರುವಾರ ರಾತ್ರಿ ನಿಧನರಾದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ರವರಿಗೆ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು.

WhatsApp Group Join Now
Telegram Group Join Now
Instagram Group Join Now

ದೇಶದ ಏಳಿಗೆಗಾಗಿ ಶ್ರಮಿಸಿದವರು ಚಂದ್ರಮೌಳಿ :

14ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮನಮೋಹನ್ ಸಿಂಗ್‌ರವರನ್ನು ಚಿಂತಕರು ಮತ್ತು ವಿದ್ವಾಂಸರಾಗಿ ಕರೆಯಲಾಗುತ್ತಿದ್ದು ನಿಗರ್ವಿಗಳಾದ ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದರು.

ಇವರು ಪ್ರಧಾನಮಂತ್ರಿಯಾಗಿ 10 ವರ್ಷಗಳ ಕಾಲ ಭಾರತ ದೇಶದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದು ದೇಶವನ್ನೇ ಸುಸ್ಥಿತಿಗೆ ಕೊಂಡೊಯ್ದಿದ್ದರು. ದೇಶದ ಭದ್ರತೆಯ ದೃಷಿಯಿಂದ ಹಿಡಿದು ದೇಶದ ಜನರ ಸುರಕ್ಷಿತವಾಗಿ 10 ವರ್ಷಗಳ ಕಾಲ ಆಡಳಿತ ನಡೆಸಿದವರು ಎಂದು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಮೌಳಿ ಗೌಡರ ಹೇಳಿದರು.

ಈ ಸಂತಾಪ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಾದ ಶ್ರೀನಿವಾಸ್ ಕಾಮತ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಗುರುರಾಜ್, ಅಂಜನ್ ಟೆಕ್ಸ್ ಟೈಲ್ಸ್ ರಾಜಮೂರ್ತಿ, ಎಂ.ಪಿ.ಸುರೇಶ್, ಬೃಂದಾವನ ಪ್ರವೀಣ್, ಕಳೂರು ಕೃಷ್ಣಮೂರ್ತಿ, ಜಯನಗರ ಗುರು, ವೇದಂತಪ್ಪ ಗೌಡ, ಸುರೇಶ್‌ಕುಮಾರ್, ಮಾವಿನಕೊಪ್ಪ ಮಂಜುನಾಥ್, ಉಬೇದುಲ್ಲ, ನಾಸೀರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment