ಹೊಸನಗರ ; ಮಂಗಳವಾರ ಮಧ್ಯಾಹ್ನ 2;30ರ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್‌ಗಾವ್‌ನ ಬೈಸರನ್‌ನಲ್ಲಿ ಸುಮಾರು 28 ಹಿಂದುಗಳನ್ನು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಹತ್ಯೆ ನಡೆಸಲಾಗಿದ್ದು ಭಾರತ ದೇಶದ ಅನ್ನ ತಿಂದು ಗಾಳಿ ಸೇವಿಸಿ ಇಲ್ಲಿಯೇ ನೆಲೆ ನಿಂತಿರುವ ಮುಸ್ಲಿಂ ಸಂಘಟನೆ ಉಗ್ರವಾಗಿ ಖಂಡಿಸಬೇಕಿತ್ತು. ಆದರೆ ಭಾರತ ದೇಶದ ಮುಸ್ಲಿಂ ಸಂಘಟನೆ ಇಲ್ಲಿಯವರೆಗೆ ಖಂಡಿಸದಿರುವುದು ದುರದೃಷ್ಟಕರ ಎಂದು ಹಿಂದು ಸಂಘಟನೆಯ ಮುಖ್ಯಸ್ಥ ಎಂ.ಎನ್ ಸುಧಾಕರ್ ಹೇಳಿದರು.
ತಾಲ್ಲೂಕಿನ ವಿವಿಧ ಹಿಂದು ಪರ ಸಂಘಟನೆ, ಎಬಿವಿಪಿ ಸಂಘಟನೆ ಹಾಗೂ ತಾಲ್ಲೂಕು ಬಿಜೆಪಿ ವತಿಯಿಂದ ಬಸ್ ನಿಲ್ದಾಣದ ಆವರಣದಿಂದ ತಾಲ್ಲೂಕು ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಂದಾಯ ಇಲಾಖೆಯ ಗ್ರೇಡ್2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಬಿಜೆಪಿ ಹಿರಿಯ ಮುಖಂಡ ಎನ್.ಆರ್ ದೇವಾನಂದ್ ಈ ಸಂದರ್ಭದಲ್ಲಿ ಮಾತನಾಡಿ, ಹಿಂದೂ ರಾಷ್ಟ್ರದಲ್ಲಿ ಹಿಂದುಗಳೇ ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತಿಲ್ಲ ನಮ್ಮ ಪಕ್ಷದ ರಾಷ್ಟ್ರವಾದ ಪಾಕಿಸ್ತಾನ ದೇಶ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಗೃಹ ಸಚಿವರಾದ ಅಮಿತ್ ಶಾ ರವರು ದಿಟ್ಟತನದಿಂದ ಕೆಟ್ಟ ಪಾಕಿಸ್ತಾನವನ್ನು ನಿರ್ನಾಮ ಮಾಡಬೇಕು. ನಿರ್ನಾಮ ಮಾಡಲು ನಮ್ಮ ಭಾರತ ದೇಶದ ಸೈನಿಕರಿಗೆ ಬೆಂಬಲವಾಗಿ ನಿಂತು ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳ ಮೇಲೆ ದಾಳಿ ಮಾಡಲು ಆದೇಶಿಸಬೇಕು ಭಾರತ ದೇಶದ ಪ್ರಜೆಗಳು ಸುರಕ್ಷತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.
ಹಿಂದು ಸಂಘಟನೆಯ ನೇತೃತ್ವ ವಹಿಸಿದ ಸುಧೀಂದ್ರ ಪಂಡಿತ್ ಮಾತನಾಡಿ, ಭಾರತ ದೇಶದ ಪ್ರಜೆಗಳಾದ ನಾವು ಒಟ್ಟಾಗದಿದ್ದರೇ ಮುಂದಿನ ದಿನದಲ್ಲಿ ಇನ್ನೊಬ್ಬರಿಗಾಗುವ ನೋವು ನಮಗೂ ನಿಮಗೂ ಆಗುವ ಕಾಲಕ್ಕೆ ದೂರವಿಲ್ಲ ಹಿಂದುಗಳೇ ಒಂದಾಗಿ ಒಟ್ಟಾಗಿ ಈ ಕೃತ್ಯವನ್ನು ಖಂಡಿಸುವುದರ ಜೊತೆಗೆ ಎಲ್ಲರೂ ನಮ್ಮ ಭಾರತ ದೇಶದ ಸೈನಿಕರಿಗೆ ಬೆಂಬಲಿಸೋಣ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ, ಹಲಸಿನಮನೆ ರಮೇಶ್, ಜಿಲ್ಲಾ ಪಂಚಾಯತಿ ಮಾಜೀ ಸದಸ್ಯ ಸುರೇಶ್ ಸ್ವಾಮಿರಾವ್ ಇನ್ನಿತರರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಎನ್ ಶ್ರೀಧರ ಉಡುಪ, ಸತ್ಯನಾರಾಯಣ ವಿ, ಮಂಜುನಾಥ್ ಸಂಜೀವ, ಗಣಪತಿ ಬೆಳಗೋಡು, ಮುರುಳಿಧರ ಹತ್ವಾಲ್, ಹೆಚ್. ಶ್ರೀನಿವಾಸ್, ಗೌತಮ್ ಕುಮಾರಸ್ವಾಮಿ, ರಮೇಶ್ ಶೆಟ್ಟಿ, ಬಸವರಾಜ್, ಮಂಡಾನಿ ಮೋಹನ್, ವಿನಯ್ ಭಂಡಾರಿ, ಮಹೇಂದ್ರ, ಶಿವಕುಮಾರ್, ಶ್ರೀಪತಿರಾವ್, ಚಿಕ್ಕಮಣತಿ ಅಭಿಲಾಷ್, ಮನುಕುಮಾರ್, ಹೆಚ್ ಕೆ ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.