ಶಿವಮೊಗ್ಗ ಆಸ್ಪತ್ರೆಯಲ್ಲಿ ನವಜಾತ ಶಿಶು ಹ*ತ್ಯೆ: ಹೆತ್ತ ತಾಯಿಯೇ ಬಂಧನ ಏನಿದು ಪ್ರಕರಣ?

Written by Koushik G K

Published on:

ಶಿವಮೊಗ್ಗ : ಜಿಲ್ಲಾ ಆಸ್ಪತ್ರೆಗೆ ಸೇರಿದ ಹೆರಿಗೆ ವಾರ್ಡ್‌ನ ಶೌಚಾಲಯದಲ್ಲಿ ಆ.16ರಂದು ಪತ್ತೆಯಾಗಿದ್ದ 1 ದಿನದ ಗಂಡು ಮಗುವಿನ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸಿ ನಿಜಾಂಶ ಬಯಲಿಗೆಳೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತನಿಖೆಯ ಪ್ರಕಾರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಎಂಬ ಮಹಿಳೆಯೇ ತಾನು ಹೆತ್ತ ಮಗುವನ್ನು ಬ್ಲೇಡ್‌ನಿಂದ ಕತ್ತು ಕೊಯ್ದು ಹ*ತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಆ.16ರಂದು ಶೈಲಾ ನಾದಿನಿಯ ಹೆರಿಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಆಗಿತ್ತು.ಆ ದಿನ ಶೈಲಾ ಆಸ್ಪತ್ರೆಗೆ ಬಂದಾಗ ಆಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡು ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಶೌಚಾಲಯದಲ್ಲೇ ಒಬ್ಬಳೇ ನಾರ್ಮಲ್ ಹೆರಿಗೆ ಮಾಡಿಕೊಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಆತಂಕಗೊಂಡ ಶೈಲಾ ಮಗುವಿನ ಕತ್ತು ಬ್ಲೇಡ್‌ನಿಂದ ಕೊಯ್ದು ಕೊ-ಲೆ ಮಾಡಿದ್ದಾಳೆ ಎಂದು ತನಿಖೆ ವೇಳೆ ಬಾಯಿಬಿಟ್ಟಿದ್ದಾಳೆ.

ಈ ಪ್ರಕರಣದಲ್ಲಿ ಆರಂಭದಲ್ಲೇ ಶೈಲಾಳ ಮೇಲೆ ಪೊಲೀಸರಿಗೆ ಅನುಮಾನವಿದ್ದರೂ, ದಂಪತಿ ಮಗು ತಮ್ಮದಾಗಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ತನಿಖೆ ಕಷ್ಟಕರವಾಗಿತ್ತು. ಆದರೂ, ಆಸ್ಪತ್ರೆಯ ದಾಖಲೆಗಳು ಹಾಗೂ ಸಿಬ್ಬಂದಿ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಶೈಲಾಳನ್ನು ಕಟ್ಟುನಿಟ್ಟಿನ ವಿಚಾರಣೆಗೆ ಒಳಪಡಿಸಿದರು. ಕೊನೆಗೆ ಆಕೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

ಪ್ರಕರಣದಲ್ಲಿ ದೊಡ್ಡಪೇಟೆ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಶೈಲಾಳನ್ನು ಬಂಧಿಸಿದ್ದಾರೆ.

Leave a Comment