ಹೊಸನಗರ

ಹೊಸನಗರದಲ್ಲಿ ಅ. 18ರಂದು ಔಷಧ ವ್ಯಾಪಾರಿಗಳ ಸಂಘದ ಸಭೆ

ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮಾಸಿಕ ಸಭೆಯು ಅಕ್ಟೋಬರ್ 18ರ ಭಾನುವಾರದಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆಯಲಿದೆ.

ಹೊಸನಗರದಲ್ಲಿ ಅ. 18ರಂದು ಔಷಧ ವ್ಯಾಪಾರಿಗಳ ಸಂಘದ ಸಭೆ Medicals

ಹೊಸನಗರ ; ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮಾಸಿಕ ಸಭೆಯು ಅಕ್ಟೋಬರ್ 18ರ ಭಾನುವಾರದಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆಯಲಿದೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ತಾಲೂಕು ಹಾಗೂ ಕೋಣಂದೂರು ವಿಭಾಗದ ಔಷಧ ವ್ಯಾಪಾರಿಗಳ ಸಂಘದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಘದ ಉಪಾಧ್ಯಕ್ಷ ಹಾಗೂ ರಾಮಕೃಷ್ಣ ಮೆಡಿಕಲ್ಸ್ ಮಾಲೀಕ ಎನ್. ದತ್ತಾತ್ರೇಯ ಉಡುಪ ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ:

ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಜಿಲ್ಲಾ ಮ್ಯಾನೇಜಿಂಗ್ ಕಮಿಟಿಯ ನೇತೃತ್ವದಲ್ಲಿ ನಿಗದಿತ ಅಜೆಂಡಾದಂತೆ ಸಭೆ ಜರುಗಲಿದೆ. ತದನಂತರ 12 ಗಂಟೆಯಿಂದ 1 ಗಂಟೆಯವರೆಗೆ ಹೊಸನಗರ ಮತ್ತು ಕೋಣಂದೂರು ಭಾಗದ ಔಷಧ ವ್ಯಾಪಾರಿಗಳಿಗಾಗಿ ವಿಶೇಷ ‘ಚಿಂತನ ಮಂಥನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗಣ್ಯರಿಗೆ ಸನ್ಮಾನ:

ಇದೇ ವೇದಿಕೆಯಲ್ಲಿ ತಾಲೂಕಿನ ಹಿರಿಯ ಔಷಧ ವ್ಯಾಪಾರಿಗಳನ್ನು ಹಾಗೂ ನೂತನ ಪತ್ರಕರ್ತರ ಸಂಘದ ಅಧ್ಯಕ್ಷರನ್ನು ಗೌರವಿಸಲಾಗುವುದು. ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಹೊಸನಗರ ಹಾಗೂ ಕೊಣಂದೂರು ಭಾಗದ ಎಲ್ಲಾ ಔಷಧ ವ್ಯಾಪಾರಿಗಳು ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!