ಹೊಸನಗರ

ಹೊಸನಗರ ; ಜಾಕ್‌ವೆಲ್‌ಗೆ ವಿದ್ಯುತ್ ಸರಬರಾಜಿನ ಎಬಿ ಕೇಬಲ್ ದುರಸ್ಥಿಗೆ ಮೆಸ್ಕಾಂ ಎಸ್‌ಇ ಜಯದೇವಪ್ಪ ಸೂಚನೆ

ಹೊಸನಗರ ; ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗೆ ನಿರಂತರ ವಿದ್ಯುತ್ ಒದಗಿಸವಂತೆ ಆಗ್ರಹಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಸಾರ್ವಜನಿಕರೊಳಗೊಂಡ ನಿಯೋಗವು ಶಿವಮೊಗ್ಗ ವಿಭಾಗದ ಮೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಯದೇವಪ್ಪ ಅವರನ್ನು ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಭೇಟಿ ಮನವಿ ಮಾಡಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಕೆಲವು ವರ್ಷಗಳ ಹಿಂದೆ ಜಾಕ್‌ವೆಲ್‌ಗೆ ಅಳವಡಿಸಿ ಎಬಿ ಕೇಬಲ್ ಶಿಥಿಲಾವಸ್ಥೆಯಲ್ಲಿದೆ. ಪಂಚಾಯ್ತಿ ಸರಬರಾಜು ಮಾಡಿದ ಕೇಬಲ್ ಅನ್ನು ಮೆಸ್ಕಾಂ ಅಳವಡಿಸಿತ್ತು. ಬಹಳ ಕಳಪೆ ಗುಣಮಟ್ಟದ ಕೇಬಲ್ ಅಳವಡಿಸಿದ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದ್ದು, ಇದೇ ಜನವರಿ 30ರಂದು ತಾಲೂಕಿನ ಎಲ್ಲಾ ವಿದ್ಯುತ್ ಫೀಡರ್‌ಗಳ ಸಂಪರ್ಕ ತಪ್ಪಿಸಿ, ಕೇಂದ್ರ ಸ್ಥಾನದಲ್ಲಿ ದುರಸ್ತಿಗೆ ಮುಂದಾಗುವಂತೆ ಎಇಇ ಚಂದ್ರಶೇಖರ್, ವಿಭಾಗೀಯ ಅಧಿಕಾರಿ ಮಾಯಣ್ಣಗೌಡ ಅವರಿಗೆ ಸೂಚನೆ ನೀಡಿದರು.

ಕಳೆದ ಕೆಲವು ದಿನಗಳಿಂದ ಸಾಗರದ ಮೆಸ್ಕಾಂ ವಿಭಾಗದ ಅವಘಡದಿಂದಾಗಿ ಪಟ್ಟಣದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. 2/3 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಶ್ರೀಘ್ರದಲ್ಲೇ ಮಾರಿಜಾತ್ರೆ ಹಾಗು ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಎಬಿ ಕೇಬಲ್ ಬದಲಾವಣೆ ಕಾರ್ಯ ಶೀಘ್ರ ಮುಗಿಸಿ ಎಂದು ನಾಗರೀಕರು ಅಹವಾಲು ಸಲ್ಲಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಚಂದ್ರಕಲಾ ಸದಸ್ಯರಾದ ಅಶ್ವಿನಿಕುಮಾರ್, ಸಿಂಥಿಯಾ, ಆರ್. ಗುರುರಾಜ್, ಶಾಹಿನ, ನೇತ್ರಾಭಟ್, ನಿತ್ಯಾನಂದ್, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ವಾಟರ್‌ಮ್ಯಾನ್ ಬಸವರಾಜ್, ನಾಸೀರ್, ವಸಂತ ಸರಿದಂತೆ ಹಲವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>