ರಿಪ್ಪನ್‌ಪೇಟೆ : ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿಯಲ್ಲಿ ಹಿನ್ನಡೆಯಾದರೂ ಕೂಡಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಬೇಡಿಕೆಯನ್ನಾದರಿಸಿ ಅಗತ್ಯವಿರುವ ಕಡೆಯಲ್ಲಿ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಹೊನ್ನೆಬೈಲು-ಬಿಲ್ಲೇಶ್ವರ ಕೀಳೇರಿ ಸಂಪರ್ಕ ಹಳ್ಳಕ್ಕೆ 1.5 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಪ್ರಗತಿಯ ಹಂತದಲ್ಲಿದೆ. ಇದಕ್ಕೆ ಸರ್ಕಾರದ ಆರ್ಥಿಕ ಅನುಮೋದನೆ ಸಕಾಲದಲ್ಲಿ ದೊರೆಯುತ್ತಿಲ್ಲ ಗ್ಯಾರಂಟಿ ಯೋಜನೆಗೆ ಹಣ ಬಳಕೆಯಾಗುತ್ತಿರುವುದು ಕಾರಣ ಎಂದರು.
ಈ ಹಿಂದೆ ಈ ಹಿಂದೆ ಆಧಿಕಾರದಲ್ಲಿ ಇದ್ದವರು ಇದೇ ಸೇತುವೆಗೆ ಹಲವು ಭಾರಿ ಶಂಕುಸ್ಥಾಪನೆ ನರವೇರಿಸಿದ್ದರೂ ಸಹ ಶಂಕುಸ್ಥಾಪನೆಯಲ್ಲಿಯೇ ಮುಕ್ತಾಯಗೊಂಡಿತು. ಈಗ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ವತಿಯಿಂದ ಅನುದಾನವನ್ನು ತಂದು ಈ ಭಾಗದ ಜನಸಾಮಾನ್ಯರ 4 ದಶಕಗಳ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದರು.
ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಳ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಗ್ರಾಮ ಪಂಚಾಯ್ತಿ ಸದಸ್ಯರಾದ ಪಲ್ಲವಿ, ಶ್ರೀಧರ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಶಶಿಧರ, ಗುತ್ತಿಗೆದಾರ ಜಗದೀಶಗೌಡ, ಬಿಲ್ಲೇಶ್ವರ ಮತ್ತು ಹೊನ್ನೆಬೈಲು ಹಾಗೂ ಆನೆಗದ್ದೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.