RIPPONPETE | ಇತ್ತೀಚೆಗೆ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಗವಟೂರು ಗ್ರಾಮದ ಹಳೆಯೂರು ವಿದ್ಯಾರ್ಥಿ ಮನೆಗೆ ಮತ್ತು ಹರತಾಳು ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿ ಹಾವು ಕಚ್ಚಿ ಮೃತರಾದ ಮಹಿಳೆ ಮನೆಗೆ, ಮಳೆ ಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ಮನೆಗಳಿಗೆ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರವನ್ನು ನೀಡುವ ಮೂಲಕ ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು.
ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಜಿಂಕೆ ರಕ್ಷಣೆ !
ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿಕೊಪ್ಪದಲ್ಲಿ ಹಾವು ಕಡಿತಕ್ಕೊಳಗಾಗಿ ದುರ್ಮಣಕ್ಕೀಡಾದ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ಮಾಡಿದರು. ನಂತರ ಗವಟೂರು ಗ್ರಾಮ ಹಳೆಯೂರಿನ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ತಮ್ಮ ಮನೆಯ ಮುಂಭಾಗದಲ್ಲಿನ ಕಂಬದಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದು ಸಾವನ್ನಪ್ಪಿದ ಕಾರ್ತಿಕ್ ಕುಟುಂಬಕ್ಕೆ ಸಾಂತ್ವನ ಹೇಳಿ, ಆದಷ್ಟು ಬೇಗ ಮೆಸ್ಕಾಂ ಇಲಾಖೆಯಿಂದ ಶೀಘ್ರ 5 ಲಕ್ಷ ರೂ. ಪರಿಹಾರ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿ ಗ್ರಾಮ ಪಂಚಾಯಿತಿಯಿಂದ ಮನೆ ನೀಡುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದರು.
ಭಾರಿ ಗಾಳಿ, ಮಳೆಯಿಂದಾಗಿ ಹಾನಿಗೊಳಗಾದ ಹರತಾಳು, ಶುಂಠಿಕೊಪ್ಪ, ಮಾರುತಿಪುರ, ಜೇನಿ, ಅರಳಿಕೊಪ್ಪ, ಮೇಲಿನಬೇಸಿಗೆ, ಮೆಣಸಕಟ್ಟೆ, ಎಂ.ಗುಡ್ಡೆಕೊಪ್ಪ, ವರಕೋಡು, ಕೋಡೂರು, ಕುಸುಗುಂಡಿ, ಚಿಕ್ಕಜೇನಿ ಮತ್ತು ರಿಪ್ಪನ್‌ಪೇಟೆ ವ್ಯಾಪ್ತಿಯ ಪ್ರದೇಶಗಳಿಗೆ ಮತ್ತು ಕುಟುಂಬಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯಿತ್ ಅಧ್ಯಕ್ಷ ಧನಲಕ್ಷ್ಮಿ, ತಹಶೀಲ್ದಾರ್ ರಶ್ಮಿ ಹಾಲೇಶ್, ಮೆಸ್ಕಾಂ ಎಇಇ ಚಂದ್ರಶೇಖರ್, ತಾ.ಪಂ ಇಓ ನರೇಂದ್ರ, ಪಿಡಿಓ ಮಧುಸೂದನ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಹೋಬಳಿ ಘಟಕದ ಅಧ್ಯಕ್ಷ ಗಣಪತಿ ಗವಟೂರು, ಗ್ರಾಮ ಪಂಚಾಯಿತಿ ಸದಸ್ಯ ಡಿ.ಈ .ಮಧುಸೂಧನ್, ಆಸಿಫ್‌ಭಾಷಾ, ಹರತಾಳು ಗ್ರಾಮ ಪಂಚಾಯಿತ್ ಸದಸ್ಯ ಸಾಕಮ್ಮ, ಕೆರೆಹಳ್ಳಿ ರವೀಂದ್ರ, ಉಲ್ಲಾಸ, ಶ್ರೀಧರ, ಅಮೀರ್‌ಹಂಜಾ, ಹಿಂದೂಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಡಾಕಪ್ಪ ಚಂದಾಳದಿಂಬ, ಸಣ್ಣಕ್ಕಿ ಮಂಜು ಇನ್ನಿತರರು ಹಾಜರಿದ್ದರು.