Hosanagara

ಹೊಸನಗರ ಗಂಗಾಧರೇಶ್ವರ ದೇವಸ್ಥಾನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ₹ 3 ಲಕ್ಷ ದೇಣಿಗೆ : ಅಭಿನಂದನೆ

InShot 20260821 195919491

ಹೊಸನಗರ : ಇಲ್ಲಿನ ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನ ಸುಮಾರು ₹ 3 ಕೋಟಿ ವೆಚ್ಚದಲ್ಲಿ ನೂತನ ಶಿಲಾಮಯ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಶಾಸಕ ಬೇಳೂರು ಗೋಪಾಲಕೃಷ್ಣ ಶಾಸಕರ ನಿಧಿಯಿಂದ ₹ 3 ಲಕ್ಷ ಹಣ ನೀಡಿದ್ದಾರೆ ಎಂದು ಗಂಗಾಧರೇಶ್ವರ ಶಿಲಾನ್ಯಾಸ ಕಟ್ಟಡ ಸಮಿತಿ ಅಧ್ಯಕ್ಷ ಬೃಂದಾವನ ಪ್ರವೀಣ್‌ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನೂತನವಾಗಿ ಶಿಲಾಮಯ ಗಂಗಾಧರೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಲಾಗುತ್ತಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ದೇವಸ್ಥಾನಕ್ಕೆ ಆಗಮಿಸಿ ಈಗ ಶಾಸಕರ ನಿಧಿಯಿಂದ ₹ 3 ಲಕ್ಷ ಹಣ ನೀಡಿ, ಮುಂದಿನ ದಿನದಲ್ಲಿ ಸರ್ಕಾರದಿಂದ ₹ 10 ಲಕ್ಷ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಅಭಿನಂದನೆ :

ಸುಮಾರು ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಕೆಲಸಕ್ಕೆ ಮೆಚ್ಚುಗೆ ಸೂಚಿಸುವುದರ ಜೊತೆಗೆ ₹ 3 ಲಕ್ಷ ಶಾಸಕರ ನಿಧಿಯಿಂದ ಹಣ ನೀಡಿದ್ದು ಮುಂದಿನ ದಿನದಲ್ಲಿ ಇನ್ನೂ ₹ 10 ಲಕ್ಷ ಹಣ ನೀಡುವುದಾಗಿ ಭರವಸೆ ನೀಡುವುದರ ಜೊತೆಗೆ ದೇವಸ್ಥಾನಕ್ಕೆ ಹಕ್ಕುಪತ್ರವಿಲ್ಲದ ಕಾರಣ ಹಕ್ಕುಪತ್ರ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದು ಶಾಸಕಬೇಳೂರು ಗೋಪಾಲಕೃಷ್ಣರಿಗೆ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಬೃಂದಾವನ ಪ್ರವೀಣ್‌ ಅಭಿನಂದಿಸಿದ್ದಾರೆ.

ಶಾಸಕರು ಗಂಗಾಧರೇಶ್ವರ ದೇವಸ್ಥಾನಕ್ಕೆ ಬೇಟಿ ನೀಡುವ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ನಾಗರಾಜ್ ಕಾಮತ್, ಕಾರ್ಯದರ್ಶಿ ಎನ್ ಗಣೇಶ್, ಉಪಾಧ್ಯಕ್ಷ ರಘು, ಶ್ರೀಧರ, ಮಹೇಂದ್ರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಹೆಚ್. ಶ್ರೀನಿವಾಸ್, ಕೆ.ಜಿ. ನಾಗೇಶ್, ಮಹಮದ್ ಗೌಸ್, ಮಂಜುನಾಥ್(ಬಾಬು) ಅರ್ಚಕರಾದ ಶಂಕರ ಭಟ್, ಹಾಗೂ ದೇವಸ್ಥಾನ ಕಟ್ಟಡ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>