ಹೊಸನಗರ : ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ಈ ಹಿಂದೆ ₹ 32 ಸಾವಿರ ಆದಾಯ ಮಿತಿಯನ್ನು ಸರ್ಕಾರ ಘೋಷಿಸಿದ್ದು ಈಗ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಸಾಮಾಜಿಕ ಭದ್ರತಾ ಯೋಜನೆಗೆ ಬಿಪಿಎಲ್ ಕಾರ್ಡ್‌ಗೆ ಇರುವ ಆದಾಯ ಮಿತಿಯಂತೆ ₹ 1.20 ಲಕ್ಷದೊಳಗೆ ಆದಾಯ ಮಿತಿಯಿದ್ದರೆ ಭದ್ರತಾ ಯೋಜನೆ ಪಡೆಯುವ ಫಲಾನುಭವಿಗಳು ಎಂದಿನಂತೆ ಯೋಜನೆಯ ಫಲ ಪಡೆಯಬಹುದೆಂದು ಸರ್ಕಾರದ ಸುತ್ತೋಲೆ ಹೊರಡಿಸಿದ್ದು ಅದರಂತೆ ಅರ್ಹ ಫಲಾನುಭವಿಗಳು ಎಲ್ಲ ಭದ್ರತಾ ಯೋಜನೆಗಳಿಗೆ ₹ 1.20 ಲಕ್ಷ ಅದಾಯ ಮಿತಿಯೊಳಗಿರಬೇಕೆಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್ ತಿಳಿಸಿದರು.
ಸರ್ಕಾರದ ಸುತ್ತೋಲೆಯನ್ವಯ ವೃದ್ಧಾಪ್ಯ, ಅಂಗವಿಕ ಹಾಗೂ ವಿಧವಾ ವೇತನ ಪಡೆಯುತ್ತಿರುವ ಫಲಾನುಭವಿಗಳು ಸಾಮಾಜಿಕ ಭದ್ರತಾ ಯೋಜನೆಗಳು ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದರು.
ನೋಟಿಸ್ ರದ್ದು :
ಸರ್ಕಾರದ ಸುತ್ತೋಲೆಯ ಆಧಾರದಲ್ಲಿ ಈ ಹಿಂದೆ ಸುಮಾರು ₹ 3200 ಜನರಿಗೆ ಪಿಂಚಣಿ ಹಣವನ್ನು ತಡೆ ಹಿಡಿಯಲಾಗಿದ್ದು ಅವರುಗಳಿಗೆ ನೋಟಿಸ್ ನೀಡಲಾಗಿತ್ತು ಸರ್ಕಾರದ ಸುತ್ತೋಲೆಯ ಆಧಾರದಲ್ಲಿ ನೋಟಿಸ್‌ಗಳನ್ನು ರದ್ದು ಪಡಿಸಲಾಗಿದೆ ಸಾಮಾಜಿಕ ಭದ್ರತೆ ಯೋಜನೆ ಪಡೆಯುತ್ತಿರುವ ಅರ್ಹ ಫಲಾನುಭವಿಗಳು ಮುಂದಿನ ದಿನದಲ್ಲಿ ಎಂದಿನಂತೆ ಪಿಂಚಣಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗಲಿದೆ ಎಂದು ತಿಳಿಸಿದರು.

