ಮಠಗಳು ಸಮಾಜವನ್ನು ಸಂಘಟಿಸುವ ಕೇಂದ್ರಗಳಾಗಬೇಕು ; ಶ್ರೀಗಳು

Written by malnadtimes.com

Published on:

RIPPONPETE ; ಗುರುಗಳು ಸಮಾಜವನ್ನು ಸರಿ ದಿಕ್ಕಿನಲ್ಲಿ ತರುವವನೇ ನಿಜವಾದ ಗುರು.ಮಠಗಳು ಸಹ ಸಮಾಜವನ್ನು ಸಂಘಟಿಸುವ ಮೂಲಕ ದಾರಿ ತಪ್ಪಿದವರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯುವವನೇ ಗುರುವಾಗುತ್ತಾನೆಂದು ಆನಂದಪುರ ಮುರುಘರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

WhatsApp Group Join Now
Telegram Group Join Now
Instagram Group Join Now

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬ್ರಹನ್ಮಠದಲ್ಲಿ ಧನುರ್ಮಾಸದ ಮುಕ್ತಾಯ ಸಮಾರಂಭ ಮತ್ತು ಶ್ರೀಶಿವಲಿಂಗ ಪ್ರಶಸ್ತಿ ಪ್ರದಾನ ಹಾಗೂ ಧರ್ಮಸಭೆಯ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇತ್ತಿಚಿನ ದಿನಗಳಲ್ಲಿ ಸಮಾಜ ಹರಿದು ಹಂಚಿಹೋಗುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಗುರುಗಳಾದವರು ಭಕ್ತರ ಮತ್ತು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆದುಕೊಂಡು ಹೋಗುವಂತೆ ಮಾರ್ಗದರ್ಶನ ಮಾಡುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮುಂದಿನ ಯುವಪೀಳಿಗೆಯಲ್ಲಿ ಬೆಳೆಸುವಂತೆ ಮಾಡಬೇಕು. ಹಣ ಮಾಡುವುದೇ ಗುರಿಯನ್ನಾಗಿಸದೆ ಸಂಪಾದನೆಯ ಅಲ್ಪ ಹಣವನ್ನು ಧರ್ಮದ ಕಾರ್ಯಗಳಿಗೆ ದಾನ ಮಾಡುವುದರಿಂದ ಸಮಾಜ ಮುನ್ನಡೆಸಲು ಸಾಧ್ಯವೆಂದ ಅವರು ಮಠಗಳಿಗೆ ನೀಡುವ ದಾನದ ಹಣ ತ್ರಿವಿಧ ದಾಸೋಹಕ್ಕೆ ಸದ್ಬಳಕೆಯಾಗುವುದು ಇದರಿಂದ ಮಠ-ಮಾನ್ಯಗಳ ಪ್ರಗತಿಯೊಂದಿಗೆ ಸಮಾಜೋದ್ದಾರವಾಗುವುದೆಂದ ಅವರು ಕೋಣಂದೂರು ಬೃಹನ್ಮಠ ಶ್ರೀಮಂತವಲ್ಲದಿದ್ದರು ಕೂಡಾ ಭಕ್ತರ ಹೃದಯ ಶ್ರೀಮಂತಿಕೆಯಲ್ಲಿ ಶ್ರೀಮಂತವಾಗಿದೆ ಆ ನಿಟ್ಟಿನಲ್ಲಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಭಕ್ತರ ಹೃದಯ ಗೆದ್ದಿದ್ದಾರೆಂದರು.

ಇದೇ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದವರು ಕೊಡಮಾಡುವ ಶ್ರೀಶಿವಲಿಂಗ ಶ್ರೀ ಪ್ರಶಸ್ತಿಯನ್ನು ಸಾಗರದ ಹಿರಿಯ ನ್ಯಾಯವಾದಿ ಸಮಾಜ ಸೇವಕ ಎಂ.ಎಸ್.ಗೌಡರಿಗೆ ಪ್ರದಾನ ಮಾಡಿದರು.

ಧರ್ಮ ಸಮಾರಂಭವನ್ನು ಶಾಸಕ ಮಾಜಿ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ಧರ್ಮಸಮಾರಂಭದ ಅಧ್ಯಕ್ಷತೆಯನ್ನು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಳಲಿಮಠದ ಡಾ.ಗುರನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಸಂದೇಶ ಮೃತ ನೀಡಿ ವೀರಶೈವ ಸಿದ್ದಾಂತ ಶಿಖಾಮಣಿಯಲ್ಲಿ ಭೋದಿಸಿದಂತೆ ಬಸವಾದಿ ಪ್ರಮಥರ ಸಂದೇಶಗಳು ಇಂದಿನ ಯುವಜನಾಂಗಕ್ಕೆ ಮಾರ್ಗದರ್ಶಿಗಳಾಗಿವೆ ಅದನ್ನು ನಮ್ಮ ನಿತ್ಯ ಬದುಕಿನಲ್ಲಿ ಆಳವಡಿಸಿಕೊಂಡಾಗ ಮಾತ್ರ ನಾವು ನೆಮ್ಮದಿಯ ಬದುಕು ಕಾಣಲು ಸಾಧ್ಯವೆಂದರು.

ರೆಟ್ಟೆಹಳ್ಳಿ ಕಬ್ಬಿನಕಂತಿ ಮಠದ ಶಿವಲಿಂಗಶಿವಾಚಾರ್ಯ ಮಹಾಸ್ವಾಮೀಜಿ, ತೊಗರ್ಸಿ ಮಳೆಹಿರೇಮಠದ ಮಹಾಂತದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ರಾಮಘಟ್ಟದ ರೇವಣಸಿದ್ದ ಶಿವಾಚಾರ್ಯರು, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಗುತ್ತಲಕಲ್ಮಠದ ಪ್ರಭುಮಹಾಸ್ವಾಮಿಗಳು, ರಾಂಪುರ ಶಿವಕುಮಾರ ಹಾಲಸ್ವಾಮಿಗಳು, ಗೋವಿನಕೋವಿ ಶಿವಯೋಗಿ ಮಹಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದು ಉಪದೇಶಾಮೃತ ನೀಡಿದರು.

ಶ್ರೀಶಿವಲಿಂಗೇಶ್ವರ ಪಂಚಾಂಗವನ್ನು ಎಂ.ಎಲ್.ಸಿ. ಡಾ.ಧನಂಜಯ ಸರ್ಜಿ ಬಿಡುಗಡೆಗೊಳಿಸಿದರು.
ಉದ್ಯಮಿ ಕೆ.ಆರ್.ಪ್ರಕಾಶ್, ಅಕ್ಷಯ ಸಹಕಾರ ಸಂಘದ ಅಧ್ಯಕ್ಷ ದಿನೇಶ್‌ ಎಟ್ಟೆಕೊಪ್ಪ, ಬೆಳಕೋಡು ಹಾಲಸ್ವಾಮಿಗೌಡ, ವಾಗಿಶ್ ಸ್ವಾಮಿ, ಕೆ.ಎಂ.ಮೋಹನ್, ಎಂ.ಆರ್.ಸತೀಶ್, ವಿರೂಪಾಕ್ಷ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ನಿವೃತ್ತ ಪ್ರಾಚಾರ್ಯಪಂಚಾಕ್ಷರಯ್ಯ ಹಿರೇಮಠ ಮತ್ತು ಶಿವಮೊಗ್ಗ ಶಂಕರಘಟ್ಟ ಪ್ರೋ.ಹಾ.ಮಾ.ನಾಗಾರ್ಜನ ಉಪನ್ಯಾಸ ನೀಡಿದರು. ಹೊನ್ನಾಳಿ ಶ್ರೀ ಆಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿ ವಿದುಷಿ ಡಾ.ಪ್ರತಿಮ ನಿಜಗುಣಶಿವಯೋಗಿಸ್ವಾಮಿ ಇವರ ವಿದ್ಯಾರ್ಥಿಗಳು ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಭರತನಾಟ್ಯ ಕಾರ್ಯಕ್ರಮ ಜರುಗಿತು.

ಮೇಘನಾ ಕಾಳಶೆಟ್ಟಿಕೊಪ್ಪ ಪ್ರಾರ್ಥಿಸಿದರು. ಕೆ.ಎಸ್.ವೀರಭದ್ರಪ್ಪ ತೆಲಗಿ ನಿರೂಪಿಸಿದರು.

Leave a Comment