ಮೂಲೆಗದ್ದೆ ಶ್ರೀಗಳಿಂದ ಧನುರ್ಮಾಸದ ಸಂಕಲ್ಪದಂತೆ ವಿನೂತನ ಕಾರ್ಯಕ್ರಮ | ಲೋಕೋದ್ಧಾರಕ್ಕಾಗಿ ಶಿವಪಂಚಾಕ್ಷರಿ ಮಂತ್ರ ಪಠಣ ಧರ್ಮಜಾಗೃತಿ ಅಭಿಯಾನ

Written by malnadtimes.com

Published on:

RIPPONPETE ; ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ಸಂಕಲ್ಪದಂತೆ ಧನುರ್ಮಾಸದ ಅಂಗವಾಗಿ ಲೋಕೋದ್ದಾರಕ್ಕಾಗಿ ಶಿವಪಂಚಾಕ್ಷರಿ ಮಂತ್ರ ಪಠಣ ಆಭಿಯಾನವನ್ನು ವಿನೂತನವಾಗಿ ಆರಂಭಿಸುವ ಮೂಲಕ ಭಕ್ತರ ಮನೆಮನೆಗೆ ತಲುಪಿಸುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ಹಾಗೂ ಧರ್ಮಜಾಗೃತಿ ಕಾರ್ಯಕ್ರಮದೊಂದಿಗೆ ಇಂದಿನ ಯುವಸಮೂಹ ಜಾಗೃತಗೊಳಿಸುವತ್ತ ಶ್ರೀಗಳು ಮುಂದಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅವರು ರಿಪ್ಪನ್‌ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಯುವಜನಾಂಗ ಮಠಮಂದಿರದಿಂದ ದೂರವಾಗುತ್ತಿದ್ದು ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರದಿಂದ ಹಿಂದೂಳಿಯುವಂತಾಗಿರುವ ಕಾರಣ ಮುಂದೆ ನಮ್ಮ ಧರ್ಮಧಾರ್ಮಿಕ ಭಾವನೆಯನ್ನು ಇಂದಿನ ಯುವಜನಾಂಗದಲ್ಲಿ ಬೆಳಸುವ ಸಂಕಲ್ಪವನ್ನು ಮಾಡಲಾಗಿದ್ದು ಮಠದಿಂದಲೇ ಭಕ್ತರ ಮನೆಗಳಿಗೆ ತೆರಳಿ ಈ ಹಿಂದಿನ ಲಿಂಗೈಕ್ಯ ಗುರುಗಳ ಭಾವಚಿತ್ರ ಮತ್ತು ಹಾನಗಲ್ ಕುಮಾರ ಶಿವಯೋಗಿಗಳವರ ಮತ್ತು ಕ್ಷೇತ್ರ ದೇವತೆ ಚೌಡೇಶ್ವರಿ ಅಮ್ಮನವರ ಭಾವಚಿತ್ರದ ಜೊತೆ ಪಂಚಾಕ್ಷರಿ ಮಂತ್ರವಾದ ಓಂ ನಮಃ ಶಿವಾಯ ಶಿವನಾಮದ ಮಂತ್ರದ ಪ್ರತಿಯನ್ನು ಮನೆಮನೆಗೆ ಕಳುಹಿಸಲಾಗುತ್ತಿದ್ದು ಆ ಪ್ರತಿಯಲ್ಲಿ 108 ಭಾರಿ ಓಂ ನಮಃ ಶಿವಾಯ ಮಂತ್ರವನ್ನು ತಮ್ಮ ಹಸ್ತಾಂಕ್ಷರದಲ್ಲಿ ಬರೆದು ಜನವರಿ 15 ರಂದು ಶ್ರೀಮಠದಲ್ಲಿ ನಡೆಯವ ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿನ ಬೆಳಗ್ಗೆ 10 ಗಂಟೆಯಿಂದ ಶಿವನಾಮ ಸ್ಮರಣೆಯ ಮಂತ್ರವನ್ನು ಪಠಣ ಮಾಡಲಾಗುವುದೆಂದರು.
ಇದರಿಂದಾಗಿ ಹೆಚ್ಚು ಧಾರ್ಮಿಕ ಜ್ಞಾನ ವೃದ್ದಿಯಾಗುವ ಮೂಲಕ ವರ್ಷದ ಒಂದು ದಿನದಲ್ಲಿಯಾದರೂ ನಮ್ಮ ಯುವಜನಾಂಗ ಆಧ್ಯಾತ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜಾಗೃತರನ್ನಾಗಿಸುವ ಈ ವಿನೂತನ ಕಾರ್ಯಕ್ಕೆ ಸಕಲ ಸಿದ್ದತೆಗಳನ್ನು ನಡೆಸಲಾಗಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಜಿಲ್ಲೆಯ ವಿವಿಧಡೆಗಳಲ್ಲಿನ ಭಕ್ತರ ಮನೆಗಳಿಗೆ ತೆರಳಿ ಶಿವನಾಮಸ್ಮರಣೆಯ ಪ್ರತಿಯನ್ನು ತಲುಪಿಸುತ್ತಿರುವುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಸಂತೋಷ, ಶಿವರಾಜ್ ಪಾಟೀಲ್, ಸತೀಶ್‌ ಮಸರೂರು, ಚನ್ನೇಶ, ಚಂದ್ರಕುಮಾರ್ ಆಲವಳ್ಳಿ, ವೀರಭದ್ರಪ್ಪಗೌಡ ಕೊಳವಳ್ಳಿ, ಚಿದಾನಂದ ಬೆಳಂದೂರು, ಜಗದೀಶ ಬೆಳಂದೂರು, ಸುಧಾಕರ ಬೆನವಳ್ಳಿ, ವೀರೇಶ ಬೆನವಳ್ಳಿ, ಬಿ.ಹೆಚ್.ಸ್ವಾಮಿಗೌಡ, ಧರ್ಮರಾಜ್ ಸಮಟಗಾರು ಇನ್ನಿತರರು ಹಾಜರಿದ್ದರು.

Leave a Comment