RIPPONPETE ; ಈ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸುಮಾರು 5 ಕೋಟಿ ರೂ. ಮತ್ತು ಈಗಿನ ಸರ್ಕಾರದ ಅನುದಾನ ಹಾಗೂ ಸಮಾಜದವರಿಂದ ಸಂಗ್ರಹಿಸಲಾದ ಹಣದಿಂದ ನಿರ್ಮಿಸಲಾಗುತ್ತಿರುವ ಶಿವಮಂದಿರ ನೂತನ ಕಟ್ಟಡದ ಕಾಮಗಾರಿ ಪೂರ್ಣ ಹಂತದಲ್ಲಿದ್ದು ಈ ಕಟ್ಟಡ ಕಾಮಗಾರಿಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿರುವ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮದುವೆ ಶುಭ ಕಾರ್ಯಗಳಿಗೆ ಉಪಯುಕ್ತವಾಗಲೆಂದು ಸಮಾಜ ಬಾಂಧವರಲ್ಲಿ ಚರ್ಚಿಸಿ ಲೋಕಾರ್ಪಣೆ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶ್ರೀಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ದುಂಡರಾಜಪ್ಪಗೌಡ, ಎಂ.ಆರ್.ಶಾಂತವೀರಪ್ಪಗೌಡ, ಹೆಚ್.ಎಂ.ವರ್ತೇಶಪ್ಪ ಹುಗುಡಿ, ಡಿ.ಎಸ್.ರಾಜಾಶಂಕರ, ಬೆಳಂದೂರು ಬಿ.ವಿ.ನಾಗಭೂಷಣ (ಸ್ವಾಮಿಗೌಡ), ಹೆಚ್.ವಿ.ಈಶ್ವರಪ್ಪಗೌಡ, ಅಖಿಲ ಭಾರತ ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಉಮೇಶ್, ಡಿ.ಈ ಮಧುಸೂದನ್, ನೆವಟೂರು ಸ್ವಾಮಿಗೌಡ, ಲಿಂಗಪ್ಪಗೌಡ ಬೆನವಳ್ಳಿ, ಹೆಚ್.ಎಸ್.ರವಿ ಬಾಳೂರು, ಬಸವೇಶ್ವರ ವೀರಶೈವ ಸಮಾಜದ ಪದಾಧಿಕಾರಿಗಳು ಸಮಾಜ ಬಾಂಧವರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.