ಹೊಸನಗರ ; ತಾಲೂಕು ಕಚೇರಿಯ ನಾಗರಾಜ ಕಿಣಿ ನಿಧನ

Written by Mahesha Hindlemane

Published on:

ಹೊಸನಗರ : ಇಲ್ಲಿನ ತಾಲೂಕು ಕಚೇರಿಯ ಸಿಬ್ಬಂದಿ ನಾಗರಕೊಡಿಗೆ ಮೂಲದ ನಾಗರಾಜ ಕಿಣಿ (56) ಮಂಗಳವಾರ ನಿಧನರಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೃತರು ಪತ್ನಿ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ತಾಲೂಕಿನ ಸಂಪೆಕಟ್ಟೆ ರುದ್ರಭೂಮಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಿತು.


ಪರಿಸರದ ಕುರಿತು ಜಾಗೃತಿ ಮುಖ್ಯ

ರಿಪ್ಪನ್‌ಪೇಟೆ ; ಪರಿಸರ ಜಾಗೃತಿ ಕುರಿತು ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೊಸನಗರ ತಾಲ್ಲೂಕು ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪ್ರದೀಪ್ ಹೇಳಿದರು.

ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ತಳಲೆ ಗ್ರಾಮದ ಕಗ್ಗಲಿ ತಲೆಕಟ್ಟಿನ ಕೆರೆ ದಂಡೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಕಾಳಜಿಯಲ್ಲಿ ಮೈಮರೆತ ಕಾರಣ ಇಂದು ಶುದ್ದ ಗಾಳಿ ದೊರೆಯದಂತಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕರು ಮನೆಗೆ ಒಂದರಂತೆ ಗಿಡ ನೆಡುವ ಮೂಲಕ ಪರಿಸರ ರಕ್ಷಣೆಯೊಂದಿಗೆ ಶುದ್ಧ ಗಾಳಿ ಪಡೆಯುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯ ಎಂದರು.

ಕಗ್ಗಲಿ ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಗೌರಮ್ಮ ಭದ್ರಪ್ಪ, ರಾಜೇಂದ್ರಗೌಡ, ಶಿವಪ್ರಕಾಶ ಪಾಟೀಲ್, ಬಸವರಾಜ ಹಾಗೂ ಧರ್ಮಸ್ಥಳ ಸಂಘದವರು ಕೆರೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗುಡ್‌ಶಫಡ್ ಚರ್ಚ್ ಅಭಿವೃದ್ದಿಗೆ ಆರ್ಥಿಕ ನೆರವಿನ ಭರವಸೆ

ರಿಪ್ಪನ್‌ಪೇಟೆ ; ತೀರ್ಥಹಳ್ಳಿ ರಸ್ತೆಯಲ್ಲಿರುವ ಗುಡ್‌ಶಫಡ್ ಚರ್ಚಿಗೆ ಬೆಂಗಳೂರಿನ ಉದ್ಯಮಿ ಸೊನಲೆ ಗ್ರಾಮದ ಮಹೇಂದ್ರ ಎಂ ಭೇಟಿ ನೀಡಿ ಚರ್ಚ್‌ನ ಧರ್ಮಗುರುಗಳಾದ ಬಿನೋಯ್‌ರವರೊಂದಿಗೆ ಸಮಾಲೋಚನೆ ನಡೆಸಿ ಚರ್ಚ್ ಅಭಿವೃದ್ದಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಚರ್ಚ್‌ನ ಸಮುದಾಯದ ಮುಖಂಡರು ಮಹಿಳೆಯರು ಹಾಗೂ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ಪಿ.ಸುಧೀರ್, ಬಿ.ರಾಮು ಬಳೆಗಾರ, ಭಾಸ್ಕರ್ ಶೆಟ್ಟಿ, ಕೆರೆಹಳ್ಳಿ ರವೀಂದ್ರ, ಮುರಳಿ ಕೆರೆಹಳ್ಳಿ, ಫ್ಯಾನ್ಸಿ ರಮೇಶ್, ವರ್ಗೀಶ್, ನಗರ ರಾಘವೇಂದ್ರ, ಸಬಾಸ್ಟಿನ್ ಮ್ಯಾಥ್ಯೂಸ್, ಹಾಜರಿದ್ದರು.

Leave a Comment