ನವೋದಯ ಶಾಲೆ ಉಚಿತ ತರಬೇತಿ ಶಿಬಿರಕ್ಕೆ ಚಾಲನೆ 

Written by malnadtimes.com

Published on:

RIPPONPETE ; ಸಮೀಪದ ಹುಂಚ ಪದ್ಮಾಂಬಾ ಪ್ರೌಢಶಾಲೆಯ ರಂಗರಾವ್ ಸ್ಮಾರಕ ಸಭಾಭವನದಲ್ಲಿ 4ನೇ ವರ್ಷದ ನವೋದಯ ಮತ್ತು ಮೊರಾರ್ಜಿ ಪರೀಕ್ಷೆಗೆ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಶಿಬಿರದ ಸಂಸ್ಥಾಪಕರಾದ ಪ್ರಕಾಶ ಜೊಯ್ಸ್ ಮಾತನಾಡಿ, ನವೋದಯ ಮತ್ತು ಮೊರಾರ್ಜಿ ದೇಸಾಯಿ ಶಾಲೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅತ್ಯುತ್ತಮ ಶಿಕ್ಷಣ ಯೋಜನೆಗಳು ಬೆಳೆಯುವ ಸ್ಥಳಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ತರಬೇತಿ ನೀಡುವ ಅವಶ್ಯಕತೆ ಇದ್ದು ನಮ್ಮ ಶಿಬಿರದ ಮೂಲ ಉದ್ದೇಶ ಮಕ್ಕಳು ಕಲಿಕಾ ಜ್ಞಾನವನ್ನು ವೃದ್ಧಿಸುವುದು ಪರೀಕ್ಷೆಗೆ ಬೇಕಾದ ಜ್ಞಾನ ಸಲಹೆ ಸೂಚನೆಗಳನ್ನು ಶಿಬಿರದ ಮೂಲಕ ಮಕ್ಕಳಲ್ಲಿ ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದಾಗಿದೆ ಎಂದರು.

ಉಚಿತ ತರಬೇತಿ ಶಿಬಿರವು 2021 ರಲ್ಲಿ ಸ್ಥಾಪಿತವಾಗಿದ್ದು ಮಲೆನಾಡಿನ ಭಾಗದ ವಿದ್ಯಾರ್ಥಿಗಳಿಗೆ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ ಆಯ್ಕೆ ಪ್ರಕ್ರಿಯೆ ಕೋಚಿಂಗ್ ಮಾದರಿ ಪರೀಕ್ಷೆ ಕಲಿಕಾ ಸಾಮಾಗ್ರಿಗಳು ಸಮಯ ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕಳೆದ ಮೂರು ವರ್ಷದಿಂದ 209 ಮಕ್ಕಳು ತರಬೇತಿಯನ್ನು ಪಡೆದಿದು ನವೋದಯ ಮತ್ತು ಮೊರಾರ್ಜಿ ಶಾಲೆಗಳಿಗೆ ತೇರ್ಗಡೆಯಾಗಿರುತ್ತಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಟೀ ಶರ್ಟ್, ನೋಟ್ ಬುಕ್ ಪೆನ್, ಹಣ ಉಳಿತಾಯ ಹುಂಡಿ ಮತ್ತು ಆಹಧ್ಯಯನ ಸಾಮಾಗ್ರಿಗಳನ್ನು ಒಳಗೊಂಡ ಸ್ವಾಗತ ಕಿಟ್‌ನ್ನು ಒಗಿಸಲಾಗುತ್ತದೆ. ಇದರ ಸೌಲಭ್ಯ ಗ್ರಾಮೀಣ ವಿದ್ಯಾರ್ಥಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಹಿಂದಿನ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಮತ್ತು ಗಿಡಗಳನ್ನು ಕೊಡಲಾಯಿತು.

ನಿವೃತ್ತ ಶಿಕ್ಷಕರಾದ ಮಂಜಪ್ಪ ಗುಳುಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಬಿರದ ಸಂಚಾಲಕ ಪ್ರಕಾಶಜೋಯ್ಸ್, ಅಭೀಷೇಕ, ಸಂಜಯ್, ನಾಗೇಶ್‌ನಾಯಕ್, ವಿನಯ್, ಶ್ರೀಕಾಂತನಾಯಕ್, ಲಕ್ಷ್ಮಣ ಇತರರು ಹಾಜರಿದ್ದರು.

Leave a Comment