ಹೊಸನಗರ

ಶರಾವತಿ ಮುಳಗಡೆ ಸಂತ್ರಸ್ಥರ ಹೋರಾಟಕ್ಕೆ ಹೊಸನಗರ ದೀವರ ಹಿತರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ; ಸೊನಲೆ ಶ್ರೀನಿವಾಸ್

ಹೊಸನಗರ ; ಶರಾವತಿ ಮುಳುಗಡೆ ಸಂತ್ರಸ್ಥರು ಕಳೆದ 60 ವರ್ಷಗಳಿಂದ ಮಾಡುತ್ತಿರುವ ಹೋರಾಟ ಮತ್ತು ಮಲೆನಾಡಿನ ರೈತರ ಕಷ್ಟನಷ್ಟಗಳನ್ನು ಸರ್ಕಾರ ಪರಿಹರಿಸಬೆಕೇಂಬ ಗುರಿ ಹೊಂದಿ ನಡೆಸುತ್ತಿರುವ ಚಳುವಳಿಗೆ ಹೊಸನಗರ ದೀವರ ಹಿತರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೊಸನಗರ ದೀವರ ಹಿತಾರಕ್ಷಣಾ ವೇದಿಕೆಯ ಅಧ್ಯಕ್ಷ ಸೊನಲೆ ಶ್ರೀನಿವಾಸ್‌ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಕುವೆಂಪು ವಿದ್ಯಾ ಶಾಲೆಯ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ಥರು ಸರ್ಕಾರದ ಗಮನ ತರುವುದರ ಜೊತೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಮಲೆನಾಡು ಭಾಗದಲ್ಲಿಯೇ ಹೆಚ್ಚು ಸಂತ್ರಸ್ಥರಿದ್ದು ಅವರಿಗೆ ಸೂಕ್ತ ಸೂರು ನೀಡಿಲ್ಲ. ಶರಾವತಿ ಮುಳಗಡೆಯಾಗುವ ಸಂದರ್ಭದಲ್ಲಿ ಸಂತ್ರಸ್ಥರು ತಮ್ಮ ಮನೆ ಆಸ್ತಿ-ಪಾಸ್ತಿಗಳನ್ನು ಧಾರೆ ಎರೆದಿದ್ದಾರೆ. 60 ವರ್ಷಗಳು ಕಳೆದರೂ ಅವರಿಗೆ ಸೂಕ್ತವಾದ ನ್ಯಾಯ ಕೊಡಿಸಲು ಯಾವುದೇ ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ. ಮುಳುಗಡೆ ಸಂತ್ರಸ್ಥರು ನಡೆಸುವ ಹೋರಾಟದಲ್ಲಿ ನಾವು ಭಾಗಹಿಸುವುದರ ಜೊತೆಗೆ ಸಂಪೂರ್ಣ ಬೆಂಬಲವಿರುತ್ತದೆ. ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಈ ಪತ್ರಿಕಾಘೋಷ್ಠಿಯಲ್ಲಿ ಮಾಸ್ತಿಕಟ್ಟೆ ವಾಸಪ್ಪ, ಮಂಡಾನಿ ಕುಮಾರ, ನರ‍್ಲೆ ಸ್ವಾಮಿ, ಬಾಳೆಕೊಪ್ಪ ನಾಗಪ್ಪ, ಗಣಪತಿ, ಕಾಪಿ ಮಹೇಶ್, ಹರಿದ್ರಾವತಿ ಸೋಮಶೇಖರ, ಮುಳುಗುಡ್ಡೆ ಭಾಸ್ಕರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!