HOSANAGARA | ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿಸಿಎ, ಬಿಎಸ್‌ಸಿ (ಪಿಸಿಎಂಸಿ) ಹಾಗೂ ಬಿಎಸ್‌ಡಬ್ಲ್ಯೂ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.
ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ
ನೂತನ ಕೋರ್ಸ್‌ಗಳ ಆರಂಭಕ್ಕೆ ವಿಶ್ವವಿದ್ಯಾಲಯ ಹಾಗೂ ಸರ್ಕಾರದಿಂದ ಅನುಮತಿ ದೊರೆತಿದ್ದು, ಆನ್‌ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ವಿಶೇಷವಾಗಿ ಬಿಸಿಎ ಪದವಿ ಕೋರ್ಸ್‌ಗಳ ಹೆಚ್ಚಿನ ಬೇಡಿಕೆಯಿದ್ದು ಔದ್ಯೋಗಿಕ ಕ್ಷೇತ್ರದಲ್ಲಿ ವಿಫಲ ಅವಕಾಶಗಳನ್ನು ಕಲ್ಪಿಸುತ್ತದೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿಯೂ ಇಂತಹ ಕೋರ್ಸ್‌ಗಳು ಆರಂಭಗೊಂಡಿರುವುದು ಸಂತಸದ ವಿಷಯ. ಪ್ರತ್ಯೇಕ ಪ್ರಯೋಗಾಲಯ ಹಾಗೂ ಭೋದಕ ವರ್ಗ ಕಾಲೇಜಿನಲ್ಲಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಉಮೇಶ್ ತಿಳಿಸಿದ್ದಾರೆ.
ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ದೀಪಕ್ ಸ್ವರೂಪ್ ಆಯ್ಕೆ
HOSANAGARA | ವಿಶ್ವದ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್‌ನ ಹೊಸನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪಟ್ಟಣದ ಸ್ನೇಹ ಸ್ಟೂಡಿಯೋ ಮಾಲೀಕ ದೀಪಕ್ ಸ್ವರೂಪ್ ಅವಿರೋಧವಾಗಿ ಆಯ್ಕೆಯಾದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಥಮ ಉಪ ಜಿಲ್ಲಾ ರಾಜ್ಯಪಾಲ-317ಸಿ ಪದಗ್ರಹಣಾಧಿಕಾರಿ ಪಿಎಂಜೆಎಫ್ ಲ|| ಸಪ್ನ ಸುರೇಶ್ ಅವರಿಂದ ಅಧಿಕಾರ ದಂಢ ಸ್ವೀಕರಿಸುವ ಮೂಲಕ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಕಾರ್ಯದರ್ಶಿಯಾಗಿ ಗರ್ತಿಕೆರೆ ಲ|| ಬಿ.ರಾಜು ಹಾಗು ಖಜಾಂಚಿಯಾಗಿ ದಂತವೈದ್ಯ ಲ|| ಡಾ. ಪ್ರವೀಣ್ ನೇಮಕಗೊಂಡರು.