ತಾಳಗುಪ್ಪ – ಯಶವಂತಪುರ ನಡುವೆ ಮತ್ತೆ ಎರಡು ವಿಶೇಷ ರೈಲುಗಳು: ಆಗಸ್ಟ್ 1, 2, 8, 9ರಂದು ಸಂಚಾರ

Written by Koushik G K

Published on:

ಶಿವಮೊಗ್ಗ: ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಇಲಾಖೆ ತಾಳಗುಪ್ಪ-ಯಶವಂತಪುರ ನಡುವಿನ ಮಾರ್ಗದಲ್ಲಿ ಎರಡು ಕಡೆಯಿಂದ ತಲಾ ಎರಡು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

WhatsApp Group Join Now
Telegram Group Join Now
Instagram Group Join Now
  • ಯಶವಂತಪುರದಿಂದ ರೈಲು ನಿರ್ಗಮನ:
    ಆಗಸ್ಟ್ 1 ಮತ್ತು 8ರಂದು ರಾತ್ರಿ 10:30ಕ್ಕೆ ಹೊರಟು ಬೆಳಿಗ್ಗೆ 4:15ಕ್ಕೆ ತಾಳಗುಪ್ಪ ತಲುಪಲಿದೆ.
  • ತಾಳಗುಪ್ಪದಿಂದ ರೈಲು ನಿರ್ಗಮನ:
    ಆಗಸ್ಟ್ 2 ಮತ್ತು 9ರಂದು ಬೆಳಿಗ್ಗೆ 8:15ಕ್ಕೆ ಹೊರಟು, ಆ ದಿನವೇ ಸಂಜೆ 4:30ಕ್ಕೆ ಯಶವಂತಪುರ ತಲುಪಲಿದೆ.
  • ನಿಲ್ದಾಣಗಳು:
    ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರ, ಸಾಗರ ಜಂಬಗಾರು.

ನೈರುತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ, ಈ ತಾತ್ಕಾಲಿಕ ರೈಲುಗಳ ಸಂಚಾರದಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

Leave a Comment