ಅನಂತಗುಣ ಪ್ರಾಪ್ತಿಗಾಗಿ ಬ್ರಹ್ಮಚರ್ಯ ನಿಯಮ ಪಾಲನೆ ; ಹೊಂಬುಜ ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ದಶಲಕ್ಷಣ ಪರ್ವದ 10ನೇ ದಿನದಂದು ಉತ್ತಮ ಬ್ರಹ್ಮಚರ್ಯ ವ್ರತಾಚರಣೆ ಮತ್ತು ನಿಯಮಗಳ ಪಾಲನೆಯಿಂದ ಪ್ರತಿಯೋರ್ವರಿಗೂ ಅನಂತಗುಣ ಪ್ರಾಪ್ರಿಯಾಗುತ್ತದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪರ್ಯೂಷಣ ಪರ್ವದ ‘ಉತ್ತಮ ಬ್ರಹ್ಮಚರ್ಯ’ ಧರ್ಮದ ಸಾರವನ್ನು ಪ್ರವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದ್ರಿಯ ನಿಗ್ರಹ ಮತ್ತು ಶಾರೀರಿಕ-ಮಾನಸಿಕ ಆರೋಗ್ಯ ಸಂರಕ್ಷಣೆಗಾಗಿ ಬ್ರಹ್ಮಚರ್ಯ ವ್ರತ ಪಾಲನೆಯು ನಿರ್ವಿಕಾರಭಾವದ ಪ್ರಸನ್ನತೆಯನ್ನು, ಚೈತನ್ಯವನ್ನು ನೀಡುತ್ತದೆ ಎಂದು ಪ್ರವಚನದಲ್ಲಿ ವಿವರಿಸಿದ ಅವರು, ಅನಂತನೋಂಪಿಯನ್ನು ಆಚರಿಸುವ ಚೈನಾಚಾರವು ಸಂಕಷ್ಟಗಳಿಂದ ಪಾರು ಮಾಡುವುದು ಎಂದು ಹೇಳಿದರು.

ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಅನಂತನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿಯಲ್ಲಿ ಪೂಜೆ ನೆರವೇರಿತು. ಊರ ಪರವೂರ ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು ಶ್ರೀಗಳವರಿಂದ ಶ್ರೀಫಲ ಮಂತ್ರಾಕ್ಷತೆ ಪಡೆದು ಧನ್ಯರಾದರು.

ಶ್ರೀ ಪದ್ಮರಾಜ ಇಂದ್ರ, ಅನಿಲ್ ಪಂಡಿತ್ ಭರತ್ ಇಂದ್ರ ಹಾಗೂ ಸಹಪುರೋಹಿತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.

Leave a Comment