HOSANAGARA ; ಒಂದು ವರ್ಷಗಳ ಹಿಂದೆ ಪ್ರಾರಂಭವಾಗಿರುವ ನಮ್ಮ ಅಡಿಕೆ ವ್ಯಾಪಾರಿಗಳ ಸಂಸ್ಥೆ ಬಗರ್‌ಹುಕುಂ ರೈತರ ಪರವಾಗಿ ಹಾಗೂ ಸಣ್ಣ ಹಿಡುವಳಿ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಮಲೆನಾಡು ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಖರೀದಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಕೀಲ ನಂಜುಂಡಪ್ಪ ಪಿ ಹೇಳಿದರು.
ಪಟ್ಟಣದ ಜೆಸಿಎಂ ರಸ್ತೆಯಲ್ಲಿರುವ ತಮ್ಮ ಸ್ವಂತ ಕಟ್ಟಡದಲ್ಲಿ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಈ ಸಂಸ್ಥೆಯನ್ನು ಪ್ರಾರಂಬಿಸುವಾಗ ಕೆಲವು ಹಿತಸಕ್ತರು ಅಡ್ಡಗಾಲು ಹಾಕಿದ್ದರು ಆದರೆ ನಾವು ಯಾವುದಕ್ಕೂ ಹೆದರದೇ ಈ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ 500ಜನ ಸದಸ್ಯರಿದ್ದೂ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸದಸ್ಯರ ಬಲ ಹೊಂದುತ್ತೇವೆ ಎಂಬ ವಿಶ್ವಾಸವಿದೆ. ಬೇರೆ ಅಡಿಕೆ ಮಂಡಿಗಳಲ್ಲಿ ರೈತರ ಬಳಿ ಆರ್.ಟಿ.ಸಿ ಇದ್ದರೆ ಮಾತ್ರ ಅಡಿಕೆ ಖರೀದಿ ಮಾಡುತ್ತಾರೆ ಮತ್ತು ಸಾಲ ನೀಡುತ್ತಾರೆ ಆದರೆ ನಾವು ಆರ್.ಟಿ.ಸಿ ಇಲ್ಲವಾದರೂ ಎಲ್ಲ ಮಂಡಿಗಳಿಗಿಂತ ಹೆಚ್ಚಿನ ಧಾರಣೆಯಲ್ಲಿ ಅಡಿಕೆ ಖರೀದಿಸುತ್ತೇವೆ ಹಾಗೂ ಸಣ್ಣ ರೈತರ ಹಾಗೂ ಬಗರ್‌ಹುಕುಂ ರೈತರ ಅನುಕೂಲಕರವಾಗಿ ಈ ಸಂಸ್ಥೆಯನ್ನು ಬೆಳೆಸುತ್ತಿದೇವೆ ಎಂದರು.
ಎಲ್ಲ ಸಲಕರಣೆ ಔಷಧಿಗಳು ಲಭ್ಯ :
ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಮೈಲು ತುತ್ತ ರಾಸಾಯನಿಕ ಗೊಬ್ಬರ ಔಷಧಿಗಳು ಹಾಗೂ ಸಲಕರಣೆಗಳನ್ನು ಮಾರಾಟ ಮಾಡಲು ನಿರ್ಧಾರಿಸಲಿದ್ದು ಮುಂದಿನ ದಿನದಲ್ಲಿ ಎಲ್ಲ ರೈತರ ಅನುಕೂಲಕ್ಕಾಗಿ ವ್ಯಾಪಾರ ಮಾಡುತ್ತೇವೆ ಎಂದರು.
ಸಾಲ ಸೌಲಭ್ಯ ಲಭ್ಯ :
ಬಗರ್‌ಹುಕುಂ ಹಾಗೂ ಸಣ್ಣ ರೈತರ ಅನುಕೂಲಕ್ಕಾಗಿ ಸಾಲ ಸೌಲಭ್ಯಗಳನ್ನು ನೀಡಲು ಸಭೆ ನಿರ್ಧರಿಸಿದ್ದು ಎಲ್ಲ ಸಣ್ಣ ಹಿಡುವಳಿ ರೈತರಿಗೆ ಹಾಗೂ ಬಗರ್‌ಹುಕುಂ ರೈತರಿಗೆ ನಮ್ಮ ಸಂಸ್ತೆಯಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಯೋಜನೆ ಮಾಡಲಾಗಿದ್ದು ರೈತರು ಇದರ ಉಪಯೋಗ ಪಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.
ಈ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಟಿ ರಾಜಪ್ಪ ಗೌಡ, ಹೆಚ್.ನಾಗರಾಜ್, ಡಿ.ಈ ಮಧುಸೂದನ್, ಎಂ.ಎನ್ ಶೇಖರಪ್ಪ, ಬಿ.ಹೆಚ್.ಬಸಪ್ಪ, ಹೆಚ್ ಶಿವಾನಂದ ಮಾವಿನಕಟ್ಟೆ, ಈಶ್ವರಪ್ಪ ಗೌಡ, ಸಿದ್ದವೀರಪ್ಪ, ಜ್ಯೋತಿ, ಕಾರ್ಯನಿರ್ವಹಣಾಧಿಕಾರಿಗಳಾದ ಗೀತಾ ಗಿರೀಶ್, ಹೆಚ್.ಎಸ್. ನಿರಂಜನ, ಅರ್ಪಿತ, ಲೋಕೇಶ್, ಹೆಚ್. ಮಲ್ಲಿಕಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.